ಬೆಂಗಳೂರು: ಖರೀದಿಯ ನೆಪದಲ್ಲಿ ಬಂದಿದ್ದ ಖದೀಮರು 15 ಕೆಜಿ ತುಪ್ಪ ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಇಲ್ಲಿಯ ಕೊಮ್ಮಘಟ್ಟ(Kommaghatta) ರಸ್ತೆಯ ಸ್ಯಾಟ್ಲೈಟ್ ಕ್ಲಬ್ ಹತ್ತಿರ ಈ ಘಟನೆ ನಡೆದಿದೆ. ಖರೀದಿ ನೆಪದಲ್ಲಿ ಬಂದ ಕಳ್ಳರು, 15 ಕೆ.ಜಿ ತುಪ್ಪ(Ghee)ವನ್ನು ಕದ್ದು ಪರಾರಿಯಾಗಿದ್ದಾರೆ. ಆರೋಪಿಗಳಿಬ್ಬರು ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಬಂದಿದ್ದರು ಎನ್ನಲಾಗಿದೆ.
ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತುಪ್ಪ ಬೇಕು ಎಂದು ನಂದಿನಿ ಸ್ಟೋರಿಗೆ ಬಂದ ಕಳ್ಳರು, 15 ಕೆಜಿ ತುಪ್ಪ ಪಡೆದು ಬ್ಯಾಗ್ ನಲ್ಲಿ ಹಾಕಿಕೊಂಡಿದ್ದಾರೆ. ಬಳಿಕ ಪೇಡಾ ಬೇಕು ಆರು ಬಾಕ್ಸ್ ಕೊಡಿ ಎಂದಿದ್ದಾರೆ. ಪೇಡ ಬಾಕ್ಸ್ ಕೊಡಲು ಡಬ್ಬದ ಕಡೆ ತಿರುಗಿದ್ದ ಸಿಬ್ಬಂದಿ, ಈ ವೇಳೆ 15 ಕೆಜಿ ತುಪ್ಪ ಇದ್ದ ಬ್ಯಾಗ್ ಸಮೇತ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕೂಡಲೇ ಮಾಲೀಕರು ಆರೋಪಿಗಳ ಬೆನ್ನು ಬಿದ್ದಿದ್ದಾರೆ. ಆದರೆ, ಅವರು ತಲೆ ಮರೆಸಿಕೊಂಡು ಹೋಗಿದ್ದಾರೆ.