ವಿಕ್ರಾಂತ್ ರೋಣ ವಾಯ್ಸ್ ಡಬ್ಬಿಂಗ್ ಮುಕ್ತಾಯ : ಅದ್ಭುತ ಅನುಭವ ಎಂದ ಕಿಚ್ಚ ಸುದೀಪ್
ಸದ್ಯ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಚಿತ್ರಗಳ ಶೂಟಿಂಗ್ ಗೂ ಅನುಮತಿ ಸಿಕ್ಕಿದೆ.. ಈ ನಡುವೆ ಮತ್ತೊಮ್ಮೆ ಶೂಟಿಂಗ್ ಅರ್ಧಕ್ಕೆ ನಿಂತಿದ್ದ ಸಿನಿಮಾಗಳ ಕೆಲಸ ಆರಂಭಗೊಂಡಿದೆ.. ಅದ್ರಂತೆ ಬಹುನಿರೀಕ್ಷಿತ ಸ್ಯಾಂಡಲ್ ವುಡ್ ಸಿನಿಮಾವಾಗಿರುವ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ಸಹ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ.. ಚಿತ್ರೀಕರಣ ಮುಗಿದು ಸಿನಿಮಾ ರಿಲೀಸ್ ಗೆ ರೆಡಿಯಾಗ್ತಿದ್ದು, ಕಿಚ್ಚ ಸುದೀಪ್ ಅವರು ಡಬ್ಬಿಂಗ್ ಕೆಲಸ ಆರಂಭಿಸಿದ್ದಾರೆ.
ಹೌದು.. ಸಿನಿಮಾದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಪ್ರಮುಖ ಕಲಾವಿದರು ತಮ್ಮ ಪಾತ್ರಗಳ ಧ್ವನಿಮುದ್ರಿಕೆ ಮಾಡುತ್ತಿದ್ದಾರೆ. ಇದೀಗ, ವಿಕ್ರಾಂತ್ ರೋಣ ಚಿತ್ರದ ನಾಯಕ ಕಿಚ್ಚ ಸುದೀಪ್ ಅವರು ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನುಭವ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ವಿಕ್ರಾಂತ್ ರೋಣ ಸಿನಿಮಾಕ್ಕೆ ವಾಯ್ಸ್ ಡಬ್ಬಿಂಗ್ ಆರಂಭಿಸಿರುವುದ ಬಗ್ಗೆ ತಿಳಿಸಿದ್ದ ಸುದೀಪ್, ಇದೀಗ ಚಿತ್ರದ ವಾಯ್ಸ್ ಡಬ್ಬಿಂಗ್ ಮುಗಿದಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಸುದೀಪ್, ವಿಕ್ರಾಂತ್ ರೋಣ ವಾಯ್ಸ್ ಡಬ್ಬಿಂಗ್‍ನನ್ನು ಮುಗಿಸಿದೆ. ಅದ್ಭುತವಾದ ಅನುಭವ, ನೂತನ ಪಾತ್ರ. 3ಡಿ ಆವೃತ್ತಿಯಲ್ಲಿರುವ ಕೆಲವು ಸ್ಯಾಂಪಲ್‍ಗಳನ್ನು ನೋಡಿದೆ. ವಿಆರ್ ಪ್ರಪಂಚದಲ್ಲಿ ನೋಡಿ ರೋಮಾಂಚನವಾಯಿತು. ಇದೀಗ ಸಾಂಗ್ ಶೂಟಿಂಗ್‍ಗಾಗಿ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದಲ್ಲದೆ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಆರಂಭವಾಗಿರುವ ರಿಯಾಲಿಟಿ ಶೋ ಗು ಮತ್ತೆ ಎಂಟ್ರಿಕೊಟ್ಟು ವೀಕೆಂಡ್ ಸಂಚಿಕೆಯಲ್ಲೂ ಅಭಿಮಾನಿಗಳಿಗೆ ಮೊದಲಿನಂತೆಯೇ ದರ್ಶನ ನಿಡಿದ್ದಾರೆ.. ಶೋ ಅರ್ಧಕ್ಕೆ ನಿಂತು ಹೋಗುವ ಮೊದಲ 3 ವಾರಗಳ ಕಾಲ ಕಿಚ್ಚ ಅವರು ವೀಕೆಂಡ್ ಸಂಚಿಕೆಯಲ್ಲಿ ಅನಾರೋಗ್ಯದ ಹಿನ್ನೆಲೆ ಕಾಣಿಸಿಕೊಂಡಿರಲಿಲ್ಲ.. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ಸಿನಿಮಾ ರಿಯಾಲಿಟಿ ಶೋಗಳಲ್ಲಿ ಮತ್ತೊಮ್ಮೆ ಬ್ಯುಸಿಯಾಗಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾಕ್ಕೆ ನಿರ್ಮಾಪಕ ಕೆ.ಮಂಜು ಬಂಡವಾಳ ಹೂಡಿದ್ದಾರೆ. ತ್ರಿಡಿ ಟೆಕ್ನಾಲಜಿಯಲ್ಲಿ ಮೂಡಿ ಬರುತ್ತಿರುವ ದೊಡ್ಡ ಬಜೆಟ್‍ನ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ. ವಿಶೇಷವೆಂದರೆ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ವಾಯ್ಸ್ ಡಬ್ ನೀಡುತ್ತಿದ್ದಾರೆ.
ಇನ್ನೂ ವಿಕ್ರಾಂತ್ ರೋಣ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.. ಆದ್ರೆ ಅದಕ್ಕೂ ಮೊದಲು ಈಗಾಗಲೇ ಬಿಡುಗಡೆಗೆ ರೆಡಿಯಾಗಿರುವ ಕಿಚ್ಚ ಸುದೀಪ್ ಅವರ ಅಭಿನಯದ ಮತ್ತೊಂದು ಬಹುನಿರೀಕ್ಷೆಯ ಸಿನಿಮಾ ಕೋಟಿಗೊಬ್ಬ 3 ರಿಲೀಸ್ ಆಗಬೇಕಿದೆ..
ಕೊರೊನಾ , ಲಾಕ್ ಡೌನ್ ಇರಲಿಲ್ಲ ಅಂದ್ರೆ ಇಷ್ಟೊತ್ತಿಗೆ ಯಾವಾಗಲೋ ಸಿನಿಮಾ ತೆರೆಕಾಣಬೇಕಾಗಿತ್ತು.. ಈ ಸಿನಿಮಾದ ನಂತರ ವಿಕ್ರಾಂತ್ ರೋಣ ರಿಲೀಸ್ ಆಗಲಿದೆ. ಅಂದ್ಹಾಗೆ ಈ ಸಿನಿಮಾಗೆ ಮೊದಲು ‘ಪ್ಯಾಂಟಮ್’ ಎಂಬ ಟೈಟಲ್ ಇಡಲಾಗಿತ್ತು.. ನಂತರದಲ್ಲಿ ಟೈಟಲ್ ಬದಲಾಯಿಸಿ ‘ವಿಕ್ರಾಂತ್ ರೋಣ’ ೆಮದು ಮರುನಾಮಕರಣ ಮಾಡಲಾಯ್ತು..
ಪವರ್ ಸ್ಟಾರ್ ಮುಂದಿನ ಚಿತ್ರಕ್ಕೆ `ದ್ವಿತ್ವ’ ಶೀರ್ಷಿಕೆ
ಸೋಷಿಯಲ್ ಮೀಡಿಯಾ ತುಂಬ ರಣವೀರ್ ಸಿಂಗ್ ಹೊಸ ಸ್ಟೈಲ್ ನದ್ದೇ ಹವಾ…!
ನಂಬಿ ಕೆಟ್ಟವರಿಲ್ಲಾ ಗುರುರಾಯರ..ರಾಯರ ಕೃಪೆಯಿಂದ ಯತಿರಾಜನಿಗೆ ಸಣ್ಣ ಗಾಯವೂ ಆಗಿಲ್ಲ : ಜಗ್ಗೇಶ್








