ಪವರ್ ಸ್ಟಾರ್ ಮುಂದಿನ ಚಿತ್ರಕ್ಕೆ `ದ್ವಿತ್ವ’ ಶೀರ್ಷಿಕೆ
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಪವನ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದ ಟೈಟಲ್ ಅನೌನ್ಸ್ ಆಗಿದ್ದು, ಚಿತ್ರಕ್ಕೆ ದ್ವಿತ್ವ ಎಂದು ಹೆಸರಿಡಲಾಗಿದೆ.
ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊಂಬಾಳೆ ಫಿಲ್ಮ್ಸ್ ಹೊತ್ತುಕೊಂಡಿದೆ. ಪುನೀತ್ ರಾಜ್ ಕುಮಾರ್ ಅವರ 31ನೇ ಸಿನಿಮಾ ಇದಾಗಿದೆ. ಈ ಚಿತ್ರ ಸೈಕೋಲಾಜಿಕಲ್ ಮತ್ತು ಥ್ರೀಲ್ಲರ್ ನಿಂದ ಕೂಡಿರುತ್ತೆ ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.
ನಿನ್ನೆ ಹೊಂಬಾಳೆ ಫಿಲ್ಮ್ಸ್ ಟ್ವಿಟ್ಟರ್ ನಲ್ಲಿ ‘ಹೊಸ ಆರಂಭಕ್ಕೆ ಹೆಸರಿಡುವ ಸಮಯ ಬಂದಾಯ್ತು. ನಾಳೆ ಬೆಳಗ್ಗೆ 11:46ಕ್ಕೆ #HombaleFilms9 ಟೈಟಲ್ ಅನಾವರಣ ಮಾಡಲಾಗುವುದು ಎಂದು ತಿಳಿಸಿತ್ತು. ಅದರಂತೆ ಇಂದು 11.46ಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಚಿತ್ರಕ್ಕೆ ಟೈಟಲ್ ಅನಾವರಣ ಮಾಡಿದೆ.
ಚಿತ್ರ ಟೈಟಲ್ ವಿಭಿನ್ನವಾಗಿದ್ದು, ದ್ವಿತ್ವ ಪದ ಅರ್ಥ ‘ಎರಡು ಬಗೆ’ ಎಂಥಿದ್ದು,ಲೂಸಿಯಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯರಾಗಿದ್ದ ಪೂರ್ಣಚಂದ್ರ ತೇಜಸ್ವಿ ಅವರೇ ದ್ವಿತ್ವ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಲಿದ್ದಾರೆ. ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಸಿನಿಮಾದ ಮೇಲೆ ಭಾರಿ ಕುತೂಹಲ ಕೆರಳಿಸಿದೆ.