ಕಪಿಲ್ ದೇವ್ ಅವರ ಜೊತೆಗಿನ ತಮ್ಮ ಬಾಲ್ಯದ ಅನುಭವ ಬಿಚ್ಚಿಟ್ಟು ಭಾವುಕರಾದ ಕಿಚ್ಚ..!
ಬೆಂಗಳೂರು : ಕಪಿಲ್ ದೇವ್ ಜೀವನಾಧಾರಿತ ಸಿನಿಮಾ ‘83’ ಸಿನಿಮಾದಲ್ಲಿ ರಣವೀರ್ ಸಿಂಗ್ನಾಯಕನಾಗಿ ಕಪಿಲ್ ದೇವ್ ರ ಪಾತ್ರದಲ್ಲಿ ಕಾಣಿಸಿಕೊಂಡಿದ್ರೆ , ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೂಡ ಬಣ್ಣ ಹಚ್ಚಿದ್ದಾರೆ.. ಈ ಸಿನಿಮಾ ಕನ್ನಡ ಅಷ್ಟೇ ಅಲ್ಲದೇ ಇತರೇ ದಕ್ಷಿಣ ಭಾರತದ ಭಾಷೆಗಳಲ್ಲೂ ಡಬ್ ಆಗಿ ರಿಲೀಸ್ ಆಗ್ತಿದೆ.. ಇದೀಗ ‘83’ ಸಿನಿಮಾದ ಬಗ್ಗೆ ಕ್ರಿಕೆಟ್ ನ ಬಹುದೊಡ್ಡ ಅಭಿಮಾನಿಯೂ ಆಗಿರುವ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ..
‘83’ ಸಿನಿಮಾ ನಮ್ಮೊಂದಿಗೆ ಒಂದು ರೀತಿಯ ಭಾವನೆಯನ್ನು ಹೊಂದಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಕನ್ನಡದಲ್ಲಿ ’83’ ಸಿನಿಮಾ ಬಿಡುಗಡೆಯಾಗುವ ಹಿನ್ನೆಲೆ ಈ ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ವಿತರಸುತ್ತಿದ್ಧಾರೆ.. ಇದರ ಕುರಿತಾಗಿ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸುದೀಪ್ ಅವರು , ತುಂಬಾ ವರ್ಷಗಳ ಹಿಂದೆ ಅಂದ್ರೆ 87-88 ರಲ್ಲಿ ಭಾರತ ವೆಸ್ಟ್ ಇಂಡಿಸ್ ಜೊತೆ ಆಡುವಾಗ ಕಪಿಲ್ ಸರ್ ನೋಡೋಕೆ ಹೋಗಿದ್ದೆ.
ಅಲ್ಲಿ ಅವರ ಜೊತೆ ಫೋಟೋ ಕೇಳಿದೆ. ಆದ್ರೆ ನನ್ನ ಬ್ಯಾಡ್ ಲಕ್ ಕ್ಯಾಮೆರಾ ವರ್ಕ್ ಆಗಿಲ್ಲ. ಆಗ ನಾನು ಆಳ್ತಾ ಇದೆ. ಅವಾಗ ನನ್ನ ಕಣ್ಣನ್ನು ಒರೆಸಿ ನನ್ನನ್ನು ಎತ್ತಿಕೊಂಡಿದ್ದರು. ಆದರೆ ಈಗ ಇವರ ಸಿನಿಮಾ ವಿತರಣೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ಭಾವುಕರಾಗಿದ್ದಾರೆ. ನನಗೆ ಕಪಿಲ್ ತುಂಬಾ ಇಷ್ಟ. ಆ ದಿನ ನನಗೆ ತುಂಬಾ ವಿಶೇಷ, ನನಗೆ ಅವರು ಹೀರೋ ಆದವರು. ತುಂಬಾ ವರ್ಷ ಅವರ ಜೊತೆ ಫೋಟೋಗಾಗಿ ತುಂಬಾ ವೇಟ್ ಮಾಡಿದ್ದೀನಿ. ನಾನು ಪ್ರೀತಿ ಮಾಡುವ ಗೇಮ್, ಆಡೋಕೆ ಸಿಕ್ಕಿರೋ ಗೇಮ್ ಕ್ರಿಕೆಟ್. ಕನ್ನಡಕ್ಕೆ 83 ಸಿನಿಮಾ ಅರ್ಪಿಸುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದಿದ್ದಾರೆ.
ಅಲ್ಲದೇ 83 ಸಿನಿಮಾದ ಟ್ರೇಲರ್ ನೋಡಿದ ಪ್ರತಿಯೊಬ್ಬರ ಮನಸ್ಸು ಬದಲಾಗುತ್ತೆ. ಬಾರಿ ಕ್ರಿಕೆಟ್ ನೋಡುವವರು ಮಾತ್ರವಲ್ಲ ಎಲ್ಲರೂ ಇದನ್ನು ಇಷ್ಟ ಪಡುತ್ತಾರೆ. ರಣವೀರ್ ನಟನೆ ಮಾತ್ರ ಅದ್ಭುತವಾಗಿ ಮೂಡಿಬಂದಿದೆ. ಅವರು ಹೇಗೆ ಇದಕ್ಕೆ ಕೆಲಸ ಮಾಡಿದ್ದಾರೆ ಎಂಬುದು ಈ ಟ್ರೇಲರ್ ನೋಡಿದರೆ ತಿಳಿಯುತ್ತೆ ಎಂದಿದ್ದಾರೆ..
ಸಿನಿಮಾ ಎಂದರೆ ಸಿನಿಮಾ ಅಷ್ಟೇ. ಆದರೆ ಈ ಸಿನಿಮಾ ಒಂದು ರೀತಿಯ ಭಾವನೆಯನ್ನು ಹೊಂದಿದೆ. ನಾವು 83 ಅಲ್ಲಿ ಕ್ರಿಕೆಟ್ ನಡೆಯಬೇಕಾದರೆ ಚಿಕ್ಕವರಾಗಿದ್ದೆವು. ನಮಗೂ ಕ್ರಿಕೆಟ್ ಎಂದರೆ ಏನು ಎಂದು ಗೊತ್ತಿತ್ತು. ಆದರೆ ಆಗ ನಮ್ಮ ಭಾಷೆಯಲ್ಲಿ ಕ್ರಿಕೆಟ್ ಇರಲಿಲ್ಲ. ನಮಗೆ ಆ ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ ಈ ಬಗ್ಗೆ ನಮಗೆ ಕಾಲೇಜಿಗೆ ಬಂದಾಗ ತಿಳಿಯಿತು ಎಂದಿದ್ದಾರೆ..
ಇದೇ ವೇಳೆ ನಮಗೆ ಆಟದ ಹಿಂದೆ ಏನಾಗಿತ್ತು ಎಂದು ಗೊತ್ತಿಲ್ಲ. ಆದರೆ ಆ ಪಂದ್ಯದಲ್ಲಿ ಭಾರತ ತಂಡ ಗೆದ್ದಿತ್ತು ಎಂದು ಅಷ್ಟೇ ಗೊತ್ತು. ಅದಕ್ಕೆ ಅವರು ಎಷ್ಟು ಕಷ್ಟ ಪಡುತ್ತಿದ್ದರು ಎಂಬುದು ನಮಗೆ ತಿಳಿದಿಲ್ಲ. ಆದರೆ ಈಗ ಇವರೆಲ್ಲರ ಕಷ್ಟದಿಂದ ನಮ್ಮ ಕ್ರಿಕೆಟ್ ತಂಡ ವರ್ಷಕ್ಕೆ ಕೋಟಿ ರೂ. ದುಡಿಯುತ್ತಾರೆ. ಅದಕ್ಕೆಲ್ಲ ಇವರ ಪ್ರತಿಫಲ, ಶ್ರಮವೇ ಕಾರಣ ಎಂದಿದ್ದಾರೆ..
ದ್ರಾವಿಡ್ ಜೀವನಾಧಾರಿತ ಸಿನಿಮಾದಲ್ಲಿ ಕಿಚ್ಚ ಸುದೀಪ್..!
ಇನ್ನೂ ಈ ಸಿನಿಮಾ ಕೇವಲ ಒಂದು ವಲ್ಡ್ ಕಪ್ ನ ಸ್ಟೋರಿಯಲ್ಲ. ಬದಲಿಗೆ ಇಡೀ ಭಾರತದ ಕ್ರಿಕೆಟ್ ತಂಡದ ಗುರಿಯೇ ಬದಲಾದ ಒಂದು ಕಥೆಯಾಗಿದೆ. ಅದನ್ನೆಲ್ಲ ಮಾಡಿದವರು ಈ ಗಣ್ಯರು. ನಾವು ಅದನ್ನೆಲ್ಲ ನೋಡಿಲ್ಲ, ಏಕೆಂದರೆ ನಾವು ಅಲ್ಲಿ ಇರಲಿಲ್ಲ. ಇವತ್ತು ನಮ್ಮ ಕ್ರಿಕೆಟ್ ತಂಡ ಅನುಭವಿಸುತ್ತಿರುವ ಸವಲತ್ತು ಎಲ್ಲ ಇವರ ಪ್ರತಿಫಲ ಎಂದಿದ್ದಾರೆ..
ಈ ವೇಳೆ ರಣವೀರ್ ಸಿಂಗ್ ಬಗ್ಗೆ ಮಾತನಾಡಿದ ಕಿಚ್ಚ, 83ರ ವಿಶ್ವಕಪ್ ಸಮಯದಲ್ಲಿ ಯಾರು ಇರಲಿಲ್ಲ. ಆದರೆ ಅದನ್ನು ಮತ್ತೆ ಈ ಸಿನಿಮಾ ಮೂಲಕ ರಣವೀರ್ ತೋರಿಸಿದ್ದಾರೆ. ಅವರು ನಮ್ಮ ದೇಶಕ್ಕಾಗಿ ಎಷ್ಟು ಕಷ್ಟ ಪಟ್ಟರು ಎಂದು ತಿಳಿಸುವುಕ್ಕಾಗಿ ಈ ಸಿನಿಮಾವನ್ನು ತೆರೆ ಮೇಲೆ ತರಲಾಗಿದೆ. ಈ ಸಿನಿಮಾ ನಮ್ಮ ಭಾರತೀಯರು ಹೆಮ್ಮೆ ಪಡುವಂತಹ ಸಿನಿಮಾವಾಗಿದೆ ಎಂದು ಖುಷಿಪಟ್ಟಿದ್ದಾರೆ.