kichha sudeep
ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರು, ಹಿರಿಯ ಪ್ರತ್ರಕರ್ತರು , ಲೇಖಕರು ಆಗಿದ್ದ ರವಿ ಬೆಳಗೆರೆ ನಿಧನಕ್ಕೆ ಸಿನಿಮಾರಂಗದ ಗಣ್ಯರು, ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ. ಅದರಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ‘ಅಕ್ಷರ ಮಾಂತ್ರಿಕ’ನ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ‘ಕೊನೆ ಬಾರಿ ನಾನು ಅವರನ್ನು ನೋಡಿದ ಕ್ಷಣದ ಫೋಟೋ ಅತ್ಯಮೂಲ್ಯವಾಗಿರುತ್ತೆ. ಅದು ಎಲ್ಲಾ ಸ್ಪರ್ಧಿಗಳ ಪಾಲಿಗೂ ಅದ್ಭುತವಾದ ಕ್ಷಣವಾಗಿತ್ತು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನಿಮಗೆ ನೀಡಲಿ’ ಎಂದು ಬಿಗ್ ಬಾಸ್ ನೆನಪನ್ನು ಮೆಲುಕು ಹಾಕಿದ್ದಾರೆ.
ಅಂದ್ಹಾಗೆ ರವಿ ಬೆಳಗೆರೆ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರನ್ನು ಹಾಡಿ ಹೊಗಳಿದ್ದರು. ಸುದೀಪ್ ಅವರನ್ನ ಕನ್ನಡದ ಅಮಿತಾಭ್ ಬಚ್ಚನ್ ಎಂದು ಹೇಳಿದ್ದರು. ಇನ್ನೂ ರವಿ ಬೆಳಗೆರೆಗೆ ಜಗ್ಗೇಶ್, ಯೋಗರಾಜ್ ಭಟ್, ಸಿಂಪಲ್ ಸುನಿ, ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಬೆಳಗೆರೆ ಸಿನಿಮಾ ಜರ್ನಿ : ಸಿನಿಮಾರಂಗದವರ ಜೊತೆಗಿನ ವಿವಾದಗಳು..!
ಬಿಗ್ ಬಾಸ್ ನಲ್ಲಿ ‘ಬೆಳಗೆರೆ’ ಜೊತೆಗಿನ ಕ್ಷಣಗಳನ್ನ ನೆನೆದ ದೀಪಿಕಾ ದಾಸ್
‘ಇದು ರವಿ ಅವರ ‘ಸಾವಲ್ಲ’, ‘ಹುಟ್ಟು’ : ಯೋಗರಾಜ್ ಭಟ್
kichha sudeep
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel