deepika das
ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರು, ಲೇಖಕ, ಕಾದಂಬರಿಕಾರ, ನಟ, ಖ್ಯಾತ ಕ್ರೈಂ ಡೈರಿ ಕಾರ್ಯಕ್ರಮ ನಿರೂಪಕ, ಚಿತ್ರಕಥೆ ಬರಹಗಾರ, ಪತ್ರಕರ್ತ, ನಿರೂಪಕ, ಓ ಮನಸೇ ಪತ್ರಿಕೆಯ ಸಂಪಾದಕರು, ‘ಪ್ರಾರ್ಥನಾ ಶಾಲೆ’ಯ ಸಂಸ್ಥಾಪಕರೂ ಕೂಡ ಆಗಿದ್ದ ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರು ತಡರಾತ್ರಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಮುಖಂಡರು, ಸಿನಿಮಾ ರಂಗದ ಗಣ್ಯರು ಸಹ ಸಂತಾಪ ಸೂಚಿಸುತ್ತಿದ್ದಾರೆ. ಅದರಂತೆ ಧಾರಾವಾಹಿ ನಿರ್ದೇಶಕ, ನಟ ಟಿ.ಎನ್.ಸೀತಾರಾಮ್ ಅವರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ಯಾರೂ ತೋರದ ಅಕ್ಕರೆ ತೋರಿದ್ದೀರಿ, ಕಷ್ಟ ಬಂದಾಗ ಧೈರ್ಯ ತುಂಬಿದ್ದೀರಿ, ನೀವು ಹೋದದ್ದು ತೀರದ ದುಖಃ ತಂದಿದೆ ಎಂದು ಕಂಬನಿ ಮಿಡಿದಿದ್ದಾರೆ.
‘ಇದು ರವಿ ಅವರ ‘ಸಾವಲ್ಲ’, ‘ಹುಟ್ಟು’ : ಯೋಗರಾಜ್ ಭಟ್
ಅದೇ ರೀತಿ 2019ರಲ್ಲಿ ರವಿ ಬೆಳಗೆರೆ ಅವರು ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು. ಅವರ ಜೊತೆಗೆ ಕಳೆದ ಕ್ಷಣಗಳನ್ನ ನೆನಪುಗಳನ್ನ ಅದೇ ಸೀಸನ್ ನ ಪ್ರತಿಸ್ಪರ್ಧಿ ಆಗಿದ್ದ ನಟಿ ದೀಪಿಕಾ ದಾಸ್ ಅವರು ಸ್ಮರಿಸಿದ್ದಾರೆ. ರವಿ ಬೆಳಗೆರೆ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿರುವ ದೀಪಿಕಾ, ‘ಬಿಗ್ ಬಾಸ್ ಮನೆಯಲ್ಲಿ ಎಲ್ಲದಕ್ಕೂ ಹಠ ಮಾಡುತ್ತಿದ್ದರು. ಎಲ್ಲರನ್ನು ರಿ ಫ್ರೆಶ್ ಮಾಡುತ್ತಿದ್ದರು.
ರವಿ ಬೆಳಗೆರೆ ಎಂದರೆ ಬೇರೆಯದ್ದೇ ಭಾವನೆ ಇತ್ತು. ಆದರೆ ಬಿಗ್ ಬಾಸ್ ಮನೆಯಲ್ಲಿ ಮುಗ್ಧ ಮನಸ್ಸಿನ ರವಿ ಬೆಳಗೆರೆಯನ್ನ ನೋಡಿದ್ದೇವೆ. ಒಂದು ವಾರದಲ್ಲಿ ಅವರನ್ನು ಬಿಗ್ ಬಾಸ್ ಮನೆಯಿಂದ ಕಳುಹಿಸಲು ಇಷ್ಟವಿರಲಿಲ್ಲ. ಎಲ್ಲರೂ ಬಹಳ ಅತ್ತಿದ್ವಿ. ಆದರೆ ಇದೀಗ ಶಾಶ್ವತವಾಗಿ ದೂರ ಹೋಗಿದ್ದಾರೆ.’ ಎಂದಿದ್ದಾರೆ. ಇತ್ತ ಬೆಳೆಗೆರೆ ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪನವರು, ಸಚಿವ ಸುರೇಶ್ ಕುಮಾರ್, ಸುಧಾಕರ್, ಮಾಜಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಸಂತಾಪ ಚೂಸಿದ್ದಾರೆ. ಜೊತೆಗೆ ಹಲವಾರು ಸಾಹಿತಿಗಳು, ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.
deepika das
‘ಅಕ್ಷರ ಮಾಂತ್ರಿಕ’ನ ನಿಧನಕ್ಕೆ ಸಂತಾಪ ಸೂಚಿಸಿದ ‘ನವರಸ ನಾಯಕ’
`ದುರ್ಯೋಧನ’ನ ಜೊತೆ ಸಿನಿಮಾ ಮಾಡ್ತಾರಂತೆ `ಕೌರವ’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel