ಪಾಟ್ನಾ: ವ್ಯಕ್ತಿಯೊಬ್ಬ ಶಿಕ್ಷಕನನ್ನು ಅಪಹರಿಸಿ, ಬೆದರಿಸಿ ತಮ್ಮ ಮಗಳೊಂದಿಗೆ ಮದುವೆ ಮಾಡಿರುವ ಘಟನೆ ನಡೆದಿದೆ.
ಬಿಹಾರದಲ್ಲಿ (Bihar)ನ ವೈಶಾಲಿ ಎಂಬಲ್ಲಿ ಈ ಘಟನೆ ನಡೆದಿದೆ. ಕುಮಾರ್ ಎಂಬ ಶಿಕ್ಷಕ ಗೌತಮ್ ಕುಮಾರ್‌ನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ. ಶಿಕ್ಷಕ ಶಾಲೆಗೆ ಬಂದ ಸಂದರ್ಭದಲ್ಲಿ ಮೂರ್ನಾಲ್ಕು ಜನರ ತಂಡ ಅಪಹರಿಸಿ, ಮಗಳೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ.
ಗೌತಮ್ ಕುಮಾರ್ ಅಪಹರಣವಾಗುತ್ತಿದ್ದಂತೆ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ರಸ್ತೆ ತಡೆದು ಪ್ರತಿಭಟಿಸಿದ್ದಾರೆ. ಕಾಣೆಯಾಗಿದ್ದ ಶಿಕ್ಷಕನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಕುಮಾರ್‌ನ ಕುಟುಂಬ ರಾಜೇಶ್ ರೈ ಎಂಬ ವ್ಯಕ್ತಿಯ ಮೇಲೆ ಅಪಹರಣದ ಆರೋಪ ಹೊರಿಸಿದೆ. ಸದ್ಯ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.