ಬೆಂಗಳೂರು: ಪೊಲೀಸರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಇನ್ ಫಾರ್ಮರ್ (Police Informer) ಎಂದು ಹೇಳಿಕೊಳ್ಳುತ್ತ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಈ ಆರೋಪಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ವಸೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪೊಲೀಸರೊಂದಿಗೆ ಇದ್ದುಕೊಂಡು ಅವರಿಂದಲೇ ಹಣ ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ. ಈತ ಅಕ್ರಮ ದಂಧೆಯ ಕುರಿತು ಮಾಹಿತಿ ನೀಡುತ್ತೇನೆ ಎಂದು ಪೊಲೀಸರಿಗೆ ನಂಬಿಸುತ್ತಿದ್ದ. ಆನಂತರ ಏನಾದರೂ ಸುಳ್ಳು ಹೇಳಿ ಪೊಲೀಸರಿಂದ ಹಣ ಪಡೆಯುತ್ತಿದ್ದ. ಇದನ್ನು ನಂಬಿ ಪೊಲೀಸರು ಹಣ ಹಾಕಿದರೆ, ಹಣ ಪಡೆದು ನಾಪತ್ತೆಯಾಗುತ್ತಿದ್ದ. ಇದೇ ರೀತಿ ಹಲವು ಸಿಸಿಬಿ ಹಾಗೂ ಲಾ ಆಂಡ್ ಆರ್ಡರ್ ಪೊಲೀಸರಿಗೆ ಆತ ಯಾಮಾರಿಸುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.