ಪಾಪಿಯೊಬ್ಬ ಮಹಿಳೆಯನ್ನು ಅಪಹರಿಸಿ ಒಂದು ತಿಂಗಳುಗಳ ಕಾಲ ಚಿತ್ರಹಿಂಸೆ ನೀಡಿ ಮಹಿಳೆಯ ಬಾಯಿಗೆ ಫಿವಿಕ್ವಿಕ್ ಹಾಕಿರುವ ಘಟನೆ ನಡೆದಿದೆ. ಸದ್ಯ ಈ ಆರೋಪಿಯ ಮನೆಯನ್ನು ಪೊಲೀಸರು ನೆಲಸಮಗೊಳಿಸಿದ್ದಾರೆ.
ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆರೋಯಿ ಅಯಾನ್ ಪಠಾಣ್ ಎಂಬಾತ ಪಕ್ಕದ ಮನೆಯಲ್ಲಿದ್ದ 23 ವರ್ಷದ ಯುವತಿಯ ಮೇಲೆ ಕಣ್ಣು ಹಾಯಿಸಿದ್ದ. ಈತ ಆ ಯುವತಿಯ ತಾಯಿಯ ಆಸ್ತಿಯನ್ನು ಲಪಟಾಯಿಸುವುದಕ್ಕಾಗಿಯೇ ಯುವತಿಯ ಮದುವೆಗೆ ಮುಂದಾಗಿದ್ದ. ಆದರೆ, ಅವರು ಮದುವೆಗೆ ಒಪ್ಪದಿದ್ದಾಗ, ಯುವತಿ ಅಪಹರಿಸಿ, ಒಂದು ತಿಂಗಳುಗಳ ಕಾಲ ಅತ್ಯಾಚಾರ ನಡೆಸಿದ್ದಾನೆ. ನಂತರ ಥಳಿಸಿ ಗಾಯಕ್ಕೆ ಖಾರದ ಪುಡಿ ಎರಚಿ, ಆಕೆಯ ಕೂಗು ಯಾರಿಗೂ ಕೇಳಬಾರದೆಂದು ಬಾಯಿಗೆ ಫೆವಿಕ್ವಿಕ್ ಅಂಟಿಸಿ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯ ತಾಯಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗಿದೆ. ಆಕೆ ಆಸ್ತಿಯನ್ನು ಹಸ್ತಾಂತರಿಸಲು ನಿರಾಕರಿಸಿದಾಗ ಆಕೆಯ ಮೇಲೆ ಕಿಡಿಕಾರಲು ಆರಂಭಿಸಿದ್ದ. ತನ್ನ ಸಂಬಂಧಿಕರ ನೆರವಿನಿಂದ ಮಹಿಳೆಗೆ ಹಲವು ಬಾರಿ ದೈಹಿಕ ಹಿಂಸೆ ನೀಡಿದ್ದ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಯಾನ್ ನ್ನು ಬಂಧಿಸಿರವ ಪೊಲೀಸರು ಬಂಧಿಸಿದ್ದಾರೆ. ಅಯಾನ್ ಸಂಬಂಧಿಕರು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.