ಕೃಷಿ ಕ್ಷೇತ್ರದಲ್ಲಿ ಕಿಸಾನ್ ಡ್ರೋನ್ ಬಳಕೆಗೆ ಸರ್ಕಾರದ ಮಧ್ಯಂತರ ಅನುಮೋಧನೆ…

1 min read

ಕೃಷಿ ಕ್ಷೇತ್ರದಲ್ಲಿ ಕಿಸಾನ್ ಡ್ರೋನ್ ಬಳಕೆಗೆ ಸರ್ಕಾರದ ಮಧ್ಯಂತರ ಅನುಮೋಧನೆ…

ಕಿಸಾನ್ ಡ್ರೋನ್‌ಗಳನ್ನು ಬಳಸಿಕೊಂಡು ಎಲ್ಲಾ ನೋಂದಾಯಿತ ಕೀಟನಾಶಕಗಳನ್ನ ಸಿಂಪಡಿಸಲು ಕೇಂದ್ರ ಸರ್ಕಾರ ಸೋಮವಾರ ಮಧ್ಯಂತರ ಅನುಮೋದನೆಯನ್ನು ನೀಡಿದೆ. ಇದರ ಜೊತೆಗೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ)  ಹೊರಡಿಸಿದೆ.

ಪರಿಣಾಮಕಾರಿಯಾಗಿ ಮತ್ತು ಸುರಕ್ಷಿತವಾಗಿ ಡ್ರೋನ್ ಗಳಿಗೆ ನಿಖರವಾದ ಸೂಚನೆಗಳನ್ನ ನೀಡುವ ಮೂಲಕ ಮೂಲಕ ಕೀಟನಾಶಕ ಮತ್ತು ಪೋಷಕಾಂಶಗಳನ್ನ ಸಿಂಪಡಿಸಲು ಕಿಸಾನ್ ಡ್ರೋನ್‌ಗಳನ್ನ ಬಳಸಲು ಕೇಂದ್ರ ಅವಕಾಶ ಕೊಟ್ಟಿದೆ.

ಎರಡು ತಿಂಗಳ ಹಿಂದೆ ಕೇಂದ್ರ ಬಜೆಟ್‌ನಲ್ಲಿ, ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಕೀಟನಾಶಕಗಳು ಮತ್ತು ಪೋಷಕಾಂಶಗಳ ಸಿಂಪಡೆನೆಗಾಗಿ ‘ಕಿಸಾನ್ ಡ್ರೋನ್’ಗಳ ಬಳಕೆಯನ್ನು ಉತ್ತೇಜಿಸಲಾಗುವುದು ಎಂದು ಸರ್ಕಾರ ಹೇಳಿತ್ತು.

ಡ್ರೋನ್ ಗಳ ಮೂಲಕ ಕೀಟನಾಶಕ ಸಿಂಪಡೆನೆಗೆ ಮಧ್ಯಂತರ ಅನುಮೋದನೆ ನೀಡಲಾಗಿದೆ, ಅವುಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಈಗಾಗಲೇ ವಿವಿಧ ಬೆಳೆಗಳ ಮೇಲೆ ಮೌಲ್ಯಮಾಪನ ಮಾಡಲಾಗಿದೆ. ಈಗಾಗಲೇ ಇತರ ವಿಧಾನಗಳನ್ನು ಬಳಸಿಕೊಂಡು ದೇಶದಲ್ಲಿ ಬಳಸಲಾಗುತ್ತಿದೆ ಎಂದು ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಗಳನ್ನ ಬಳಸಿಕೊಂಡು ಕೀಟನಾಶಕಗಳ ಸಿಂಪಡೆನೆ ಮಾಡುವುದರಿಂದ ಕೀಟಗಳಿಂದ ಸಸ್ಯಗಳನ್ನ ಸಮರ್ಥವಾಗಿ ಕಾಪಾಡಿಕೊಳ್ಳಲು ರೈತರಿಗೆ ಸಹಾಯ ಮಾಡುತ್ತದೆ.

“ಡ್ರೋನ್‌ಗಳ ಮೂಲಕ ರಸಗೊಬ್ಬರ ಸಿಂಪರಣೆ ಮಾಡಲಾಗುತ್ತಿದೆ. ‘ಕಿಸಾನ್ ಡ್ರೋನ್ಸ್’ ಹೊಸ ಯುಗದ ಕ್ರಾಂತಿಯಾಗಿದೆ. ಅತಿ ಶೀಘ್ರದಲ್ಲಿ, ಹೆಚ್ಚಿನ ಸಾಮರ್ಥ್ಯದ ಡ್ರೋನ್‌ಗಳು ರೈತರಿಗೆ ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ನೇರವಾಗಿ ಮಾರುಕಟ್ಟೆಗೆ ಕಳುಹಿಸಲು ಸಹಾಯ ಮಾಡುತ್ತದೆ. ಮೀನುಗಾರರು ನದಿಗಳು ಅಥವಾ ಸಮುದ್ರಗಳಿಂದ ತಾಜಾ ಮೀನುಗಳನ್ನ ನೇರವಾಗಿ ಮಾರಾಟ ಮಾಡಲು ಕಳುಹಿಸಬಹುದು., ”ಎಂದು ಮೋದಿ ಹಿಂದೊಮ್ಮೆ ಹೇಳಿದ್ದರು.

Kisan Drone granted interim approval, SOPs released

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd