KJ George ರಾಜ್ಯ ಕಂಡ ಅತಿದೊಡ್ಡ ತೆರಿಗೆ ಕಳ್ಳರ ಪೈಕಿ ಒಬ್ಬರು
ಬೆಂಗಳೂರು : ಕೆ.ಜೆ.ಜಾರ್ಜ್ ರಾಜ್ಯ ಕಂಡ ಅತಿದೊಡ್ಡ ತೆರಿಗೆ ಕಳ್ಳರ ಪೈಕಿ ಒಬ್ಬರು ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಕೆಪಿಸಿಸಿಯ ಹಣಕಾಸು ಸಮಿತಿಗೆ ಕೆ.ಜೆ. ಜಾರ್ಜ್ ಹಾಗೂ ವಿನಯ್ ಕಾರ್ತಿಕ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಚಾರವಾಗಿ ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಬಿಜೆಪಿ, ಕೆಪಿಸಿಸಿಯ ಹಣಕಾಸು ಸಮಿತಿಗೆ ಕೆ.ಜೆ. ಜಾರ್ಜ್ ಹಾಗೂ ವಿನಯ್ ಕಾರ್ತಿಕ್ ಅವರನ್ನು ನೇಮಕ ಮಾಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೇನಾಮಿ ಆಸ್ತಿಯ ಸೂತ್ರದಾರರು ಇವರೇ ಅಲ್ಲವೇ? ಪಕ್ಷದಲ್ಲಿ ಅಕ್ರಮ ಆಸ್ತಿಯ ಸಮಾನ ಹಂಚಿಕೆ ನಡೆಯುತ್ತಿದೆಯೇ?

ಒಬ್ಬ ಸಾಮಾನ್ಯ ಟಿಂಬರ್ ವ್ಯಾಪಾರಿಯಾಗಿದ್ದ ಕೆ.ಜೆ. ಜಾರ್ಜ್ ಇಂದು ಕರ್ನಾಟಕದ ಸಿರಿವಂತರ ಪಟ್ಟಿಯಲ್ಲಿದ್ದಾರೆ. ಇವರ ಸಿರಿವಂತಿಕೆಯ ಮೂಲ ಯಾವುದು? ಕಪ್ಪು ಹಣವನ್ನು ಅಧಿಕೃತಗೊಳಿಸಲು ಜಾರ್ಜ್‌ಗೆ ಹಣಕಾಸು ಸಮಿತಿ ಸಂಚಾಲಕತ್ವ ನೀಡಲಾಗಿದೆಯೇ?
ಕೆ.ಜೆ. ಜಾರ್ಜ್ ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿದ್ದಾಗ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಎಂಬ “ಗುಳುಂ” ಯೋಜನೆ ರೂಪಿಸಲಾಗಿತ್ತು. ನಾಗರಿಕರ ವಿರೋಧದಿಂದ ಅದು ಸ್ಥಗಿತಗೊಂಡಿತ್ತು. ಆದರೆ ಟೆಂಡರ್‌ಗೂ ಮೊದಲೇ ನಿರ್ಮಾಣ ಸಂಸ್ಥೆಯಿಂದ ತೆಗೆದುಕೊಂಡ ಕಿಕ್ ಬ್ಯಾಕ್ ಕಥೆ ಏನು ಎಂದು ಪ್ರಶ್ನಿಸಿದೆ.
ಚಂದ್ರಯಾನಕ್ಕೆ ತಗಲುವ ಹಣಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಮೈಸೂರು ರಸ್ತೆ ಕಾಂಕ್ರಿಟ್ ಮಾರ್ಗಕ್ಕೆ ಮೀಸಲಿಟ್ಟಿದ್ದೇ ಕೆ.ಜೆ. ಜಾರ್ಜ್!
ಇದು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಬದಲಾಗಿ ನೀಡಿದ ಯೋಜನೆ. ಕಪ್ಪು ಹಣದ ಹೊಂದಾಣಿಕೆಗಾಗಿ ಜಾರ್ಜ್ ಬೆಂಗಳೂರು ನಾಗರಿಕರಿಗೆ ಮಾಡಿದ ಮೋಸವಿದು.#ಅಲಿಬಾಬಾಮತ್ತುಕಾಂಗ್ರೆಸ್‌ಕಳ್ಳರು
— BJP Karnataka (@BJP4Karnataka) July 9, 2022
ಚಂದ್ರಯಾನಕ್ಕೆ ತಗಲುವ ಹಣಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಮೈಸೂರು ರಸ್ತೆ ಕಾಂಕ್ರಿಟ್ ಮಾರ್ಗಕ್ಕೆ ಮೀಸಲಿಟ್ಟಿದ್ದೇ ಕೆ.ಜೆ. ಜಾರ್ಜ್! ಇದು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಬದಲಾಗಿ ನೀಡಿದ ಯೋಜನೆ. ಕಪ್ಪು ಹಣದ ಹೊಂದಾಣಿಕೆಗಾಗಿ ಜಾರ್ಜ್ ಬೆಂಗಳೂರು ನಾಗರಿಕರಿಗೆ ಮಾಡಿದ ಮೋಸವಿದು.
ಕೆ.ಜೆ.ಜಾರ್ಜ್ ರಾಜ್ಯ ಕಂಡ ಅತಿದೊಡ್ಡ ತೆರಿಗೆ ಕಳ್ಳರ ಪೈಕಿ ಒಬ್ಬರು. ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾಗ ನಾಗರಿಕರ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲಿಸುವಂತೆ ಬಿಬಿಎಂಪಿಗೆ ಆದೇಶಿಸಿದ್ದರು. ಆದರೆ ತಮ್ಮ ಸ್ವಂತ ಕಂಪನಿ ಎಂಬೆಸಿ ತೆರಿಗೆ ಬಾಕಿ ಇಟ್ಟುಕೊಂಡಿದ್ದರು!
ಒಬ್ಬ ಟಿಂಬರ್ ವ್ಯಾಪಾರಿ ಬೆಂಗಳೂರು ಅಭಿವೃದ್ಧಿ ಮಂತ್ರಿಯಾದರು. ಹೆಸರಿಗೆ ಮಾತ್ರ ಬೆಂಗಳೂರು ಅಭಿವೃದ್ಧಿ ಮಂತ್ರಿ, ಅಭಿವೃದ್ಧಿಯಾಗಿದ್ದು ಮಾತ್ರ ಜಾರ್ಜ್! ಅದೇ ಹಣಭಕ್ಷಕ ಜಾರ್ಜ್ ಈಗ ಕಾಂಗ್ರೆಸ್ ಪಕ್ಷದ ಹಣಕಾಸು ಸಂಚಾಲಕ. ಬೇನಾಮಿ ಹಣದ ಲೆಕ್ಕಿಡುವುದರಲ್ಲಿ ಜಾರ್ಜ್‌ಗೆ ಸರಿಸಾಟಿ ಬೇರೆ ಯಾರೂ ಇಲ್ಲ ಬಿಡಿ ಎಂದು ಕಿಡಿಕಾರಿದೆ.