kkr-vs-dc-19th-match | ಶಾ, ವಾರ್ನರ್ ಅರ್ಧಶತಕ.. ಡೆಲ್ಲಿ 5ಕ್ಕೆ 215 ರನ್

1 min read
kkr-vs-dc-19th-match- dc innings saaksha tv

kkr-vs-dc-19th-match | ಶಾ, ವಾರ್ನರ್ ಅರ್ಧಶತಕ.. ಡೆಲ್ಲಿ 5ಕ್ಕೆ 215 ರನ್

ಮೊದಲು ಡೆಲ್ಲಿ ಆರಂಭಿಕರ ಆರ್ಭಟ… ನಡುವೆ ಕೊಲ್ಕತ್ತಾ ಬೌಲರ್ ಗಳ ಆಟ.. ಕೊನೆಯಲ್ಲಿ ಡಿಸಿ ಬ್ಯಾಟರ್ ಗಳ ಹೊಡಿಬಡಿಯಾಟ.. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 215 ರನ್

ಇದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರ್ಭಟ..!!

ಬ್ರೆಬೋರ್ನ್ ಅಂಗಳದಲ್ಲಿ ನಿರೀಕ್ಷೆಯಂತೆ ರನ್ ಮಳೆ ಹರಿದಿದೆ. ಐಪಿಎಲ್ 19ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 215 ರನ್ ಗಳಿಸಿದೆ.

kkr-vs-dc-19th-match- dc innings saaksha tv

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭದಲ್ಲಿ ಪೃಥ್ವಿ ಶಾ ( 29 ಎಸೆತ 51 ರನ್ ) ಡೇವಿಡ್ ವಾರ್ನರ್ ( 45 ಎಸೆತ 61 ರನ್ ) ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು.

ಆದ್ರೆ ಪೃಥ್ವಿ ಶಾ ಆಟಕ್ಕೆ ಚಕ್ರವರ್ತಿ ಬ್ರೇಕ್ ಹಾಕಿದರು. ವಾರ್ನರ್ ಗೆ ಉಮೇಶ್ ಖೆಡ್ಡಾ ತೋಡಿದರು. ಇದಾದ ಬಳಿಕ ನಾಯಕ ರಿಷಬ್ ಪಂತ್ 14 ಎಸೆತ 27 ರನ್ ಗಳಿಸಿ ರಸೆಲ್ ಗೆ ವಿಕೆಟ್ ನೀಡಿದರು.

ಆದ್ರೆ ಲಲಿತ್ ಯಾದವ್ 1 ರನ್ ,ಪೊವೆಲ್ 8 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಅಕ್ಷರ್ ಪಟೇಲ್ 22, ಶರ್ದೂಲ್ ಠಾಕೂರ್ 29 ರನ್ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು.

ಕೊಲ್ಕತ್ತಾ ನೈಟ್ ರೈಡರ್ಸ್ ಪರ ಸುನಿಲ್ ನರೈನ್ 2 ವಿಕೆಟ್, ಉಮೇಶ್, ವರುಣ್, ರಸೆಲ್ ತಲಾ ಒಂದು ವಿಕೆಟ್ ಪಡೆದರು.    kkr-vs-dc-19th-match- dc innings

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd