ಆರ್ ಸಿಬಿಗೆ ಒನ್ ಡೌನ್ ಚಿಂತೆ : KKR vs RCB Dream11 Team Prediction

1 min read

ಆರ್ ಸಿಬಿಗೆ ಒನ್ ಡೌನ್ ಚಿಂತೆ : KKR vs RCB Dream11 Team Prediction

ಅಹಮದಾಬಾದ್ : 14ನೇ ಸಾಲಿನ ಐಪಿಎಲ್ ನ 30ನೇ ಸೂಪರ್ ಥ್ರಿಲ್ಲಿಂಗ್ ಮ್ಯಾಚ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

ಈ ಆವೃತ್ತಿಯಲ್ಲಿ ಎರಡನೇ ಸಲ ಮುಖಾಮುಖಿಯಾಗಲಿರುವ ಉಭಯ ತಂಡಗಳು ಗೆಲುವಿಗೆ ಕಾರ್ಯತಂತ್ರ ರೂಪಿಸುವೆ. ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ 38 ರನ್ ಗಳಿಂದ ಜಯಗಳಿಸಿದ್ದ ಕೊಹ್ಲಿ ಪಡೆ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಹೆಡ್ ಟು ಹೆಡ್

ಐಪಿಎಲ್ ನಲ್ಲಿ ಈವರೆಗೂ ಈ ಉಭಯ ತಂಡಗಳು 27 ಸಲ ಮುಖಾಮುಖಿಯಾಗಿದ್ದು, ಆರ್ಸಿಬಿ 13 ಬಾರಿ, ಕೆಕೆಆರ್ 4 ಬಾರಿ ಗೆಲುವು ಕಂಡಿದೆ.

ಗ್ರೌಂಡ್ ರಿಪೋರ್ಟ್
ಇಂದಿನ ಪಂದ್ಯ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪಿಚ್ ಬ್ಯಾಟಿಂಗ್ ಗೆ ಅದ್ಭುತವಾಗಿದ್ದು. ನಿಧಾನಗತಿಯ ಬೌಲರ್ ಗಳಿಗೂ ಸ್ವಲ್ಪ ನೆರವಾಗಬಹುದು. ಒಂದು ವೇಳೆ ಇದು ಸಾಧ್ಯವಾಗದೇ ಇದ್ದಲ್ಲಿ ಪಂದ್ಯವಿಡೀ ಬ್ಯಾಟಿಂಗ್ ಗೆ ನೆರವಾಗಬಹುದು. ಹೀಗಾಗಿ ಇಂದಿನ ಪಂದ್ಯ ಹೈ ಸ್ಕೋರಿಂಗ್ ಮ್ಯಾಚ್ ಆಗೋದ್ರಲ್ಲಿ ಡೌಟೇ ಇಲ್ಲ.

RCB

ಬಲಾಬಲ
ಆರ್ ಸಿಬಿಗೆ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಮ್ಯಾಕ್ಸ್ ವೆಲ್, ದೇವದತ್ ಪಡಿಕಲ್ ಆಧಾರ ಸ್ತಂಭಗಳಾಗಿದ್ದಾರೆ. ತಂಡ ಇವರ ಮೇಲೆ ಹೆಚ್ಚು ಅವಲಂಬನೆ ಆಗಿರುವುದು ತಂಡದ ಸೋಲಿಗೆ ಕಾರಣವಾಗುತ್ತಿದೆ. ಇದು ಆರ್ ಸಿಬಿ ಸೋತ ಎರಡು ಪಂದ್ಯಗಳಲ್ಲಿ ಸಾಭೀತಾಗಿದೆ. ಮುಖ್ಯವಾಗಿ ತಂಡಕ್ಕೆ ಒನ್ ಡೌನ್ ಆಟಗಾರನ ಕೊರತೆ ಕಾಡುತ್ತಿದೆ. ಆ ಸ್ಥಾನಕ್ಕೆ ಅನೇಕ ಆಟಗಾರರನ್ನು ಆಡಿಸಿದರೂ ಯಾರೋಬ್ಬರೂ ತಂಡಕ್ಕೆ ಗೆಲುವು ತಂದುಕೊಡುವ ಆಟವಾಡುತ್ತಿಲ್ಲ. ಜೊತೆಗೆ ಆಲ್ ರೌಂಡರ್ ಗಳ ಕಳಫೆ ಆಟ ತಂಡಕ್ಕೆ ಪ್ರಮುಖ ಸೆಟ್ ಬ್ಯಾಕ್ ಆಗಿದೆ. ಇನ್ನು ಬೌಲಿಂಗ್ ಸಾಲಿಡ್ ಆಗಿ ಅನಿಸಿದ್ರೂ, ದೆತ್ ಓವರ್ ಗಳಲ್ಲಿ ರನ್ ಗಳನ್ನ ಬಿಟ್ಟುಕೊಡುತ್ತಿರುವುದು ತಂಡದ ಸೋಲಿಗೆ ಕಾರಣವಾಗುತ್ತಿದೆ.

ಕೆಕೆಆರ್ : ಕೊಲ್ಕತ್ತಾ ತಂಡಕ್ಕೆ ಬೌಲಿಂಗ್ ವಿಭಾಗವೇ ಆನೆಬಲವಾಗಿದೆ. ತಂಡದಲ್ಲಿ ಬ್ಯಾಟಿಂಗ್ ಗಿಂತ ಬೌಲಿಂಗ್ ಡಿಪಾರ್ಟ್ ಮೆಂಟ್ ಬಲಿಷ್ಠವಾಗಿ ಕಾಣುತ್ತಿದೆ. ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಒಂದಿಷ್ಟು ಸಮಸ್ಯೆಗಳಿವೆ. ಮೊದಲ ನಾಲ್ಕು ಬ್ಯಾಟ್ಸ್ ಮೆನ್ ಗಳು ಪದೇ ಪದೇ ಫೇಲ್ ಆಗುತ್ತಿರುವುದು. ಜೊತೆಗೆ ಇಯಾನ್ ಮಾರ್ಗನ್ ಪಾರ್ಮ್ ನಲ್ಲಿ ಇಲ್ಲದಿರುವುದು ತಂಡದ ಸೆಟ್ ಬ್ಯಾಕ್ ಕಾರಣವಾಗಿದೆ. ಆದ್ರೆ ಕಳೆದ ಕೆಲ ಪಂದ್ಯಗಳಿಂದ ರಸೆಲ್, ಕಮ್ಮಿನ್ಸ್ ರಣಭೀಕರ ಆಟವಾಡುತ್ತಿರುವುದು ತಂಡಕ್ಕೆ ಆನೆಬಲ ಬಂದಂತಾಗಿದೆ.

ಸಂಭವ್ಯ ತಂಡಗಳು ಹೀಗಿರಬಹುದು

ಆರ್ ಸಿಬಿ ತಂಡ : ದೇವದತ್ ಪಡಿಕಲ್, ವಿರಾಟ್ ಕೊಹ್ಲಿ, ಪಟಿದಾರ್ ಅಥವಾ ಅಜರುದ್ದೀನ್, ಮ್ಯಾಕ್ಸ್ ವೆಲ್, ಎಬಿ ಡಿವಿಲಿಯರ್ಸ್, ಶಹಬಾಜ್, ಡೇನಿಯಲ್ ಸ್ಯಾಮ್ಸ್, ಕೈಲ್ ಜೆಮಿನ್ಸನ್, ಹರ್ಷಲ್ ಪಟೇಲ್, ಸಿರಾಜ್, ಚಹಾಲ್.

ಕೆಕೆಆರ್ : ಶುಬ್ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಸುನಿಲ್ ನರೈನ್, ಇಯೊನ್ ಮೋರ್ಗಾನ್ (ನಾಯಕ), ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಪ್ರಸಾದ್ ಕೃಷ್ಣ, ವರುಣ್ ಚಕ್ರವರ್ತಿ

ಡ್ರೀಮ್ ಇಲೆವೆನ್ ಪಿಕ್ಸ್

ವಿಕೆಟ್ ಕೀಪರ್ಸ್: ಎಬಿ ಡಿವಿಲಿಯರ್ಸ್ (ನಾಯಕ) , ದಿನೇಶ್ ಕಾರ್ತಿಕ್

ಬ್ಯಾಟ್ಸ್‍ಮನ್‍ಗಳು: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‍ವೆಲ್, ದೇವದತ್ ಪಡಿಕಲ್, ರಾಹುಲ್ ತ್ರಿಪಾಠಿ

ಆಲ್‍ರೌಂಡರ್‍ಗಳು: ಆಂಡ್ರೆ ರಸ್ಸೆಲ್, ಡೇನಿಯಲ್ ಸ್ಯಾಮ್ಸ್

ಬೌಲರ್‍ಗಳು: ಹರ್ಷಲ್ ಪಟೇಲ್, ಪ್ಯಾಟ್ ಕಮ್ಮಿನ್ಸ್, ಮೊಹಮ್ಮದ್ ಸಿರಾಜ್ ( ಉಪನಾಯಕ)

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd