Kodagu | ಭೂಕಂಪ, ಭೂಕುಸಿತ, ಜಡಿಮಳೆ : “ಗ್ರಾಮಸ್ಥ”ನ ಕಾವಲು..!
ಕೊಡಗು : ಸತತ ಮಳೆ, ಭೂಕುಸಿತ, ಭೂಕಂಪನಕ್ಕೆ ಕೊಡಗು-ದಕ್ಷಿಣ ಗಡಿ ಭಾಗ ನಲುಗಿಹೋಗಿದೆ.
ಯಾವಾಗ ಎಲ್ಲಿ ಏನಾಗುತ್ತದೋ ಎಂಬ ಆತಂಕದಲ್ಲಿಯೇ ಜನರು ದಿನ ಕಳೆಯುತ್ತಿದ್ದಾರೆ.
ನಿದ್ದೆಯಿಲ್ಲದ ರಾತ್ರಿಗಳನ್ನು ಕಾಣುತ್ತಿರುವ ಭಾಗಮಂಡಲ ಸಹಿತ ಸುತ್ತಮುತ್ತಲಿನ ಐದು ಗ್ರಾಮದ ಜನತೆ ಈಗ ಹೊಸ ಯೋಜನೆ ಹಾಕಿಕೊಂಡಿದ್ದಾರೆ.

ಪ್ರತಿ ಮನೆಯಿಂದ ಒಬ್ಬ ವ್ಯಕ್ತಿಯು ಸರದಿಯಲ್ಲಿ ರಾತ್ರಿಯಲ್ಲಿ ಎಚ್ಚರವಾಗಿರಬೇಕು.
ಇವರು ಭೂಕಂಪನದ ಕುರಿತು ಇತರರಿಗೆ ಎಚ್ಚರಿಕೆ ನೀಡಬೇಕು.
ಮಳೆ ಮುಂದುವರಿದಿರುವಂತೆಯೇ ಗಡಿ ಭಾಗವಾದ ಕರಿಕೆ, ಸಂಪಾಜೆ, ಪೆರಾಜೆ, ಚೆಂಬು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕವೂ ಹೆಚ್ಚುತ್ತಿದೆ.
ಶನಿವಾರ ಒಂದೇ ದಿನ ಚೆಂಬು ಪರಿಸರದಲ್ಲಿ ಎರಡು ಬಾರಿ ಮತ್ತೆ ಭೂಮಿ ನಡುಗಿದೆ. ಇದರಿಂದ ಜನರು ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ.