ಕೊಹ್ಲಿ.. ಧೋನಿಗಿಂತ ಹೆಚ್ಚು ಸಂಭಾವನೆ ಪಡೆಯೋ ಆಟಗಾರರು..! Kohli saaksha tv
ಮುಂಬೈ : ಐಪಿಎಲ್ 15ನೇ ಆವೃತ್ತಿಗೆ ತಂಡಗಳು ರಿಟೈನ್ ಮಾಡುವ ಆಟಗಾರರ ಪಟ್ಟಿ ರಿಲೀಸ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಲಾ 4 ಆಟಗಾರರನ್ನು ಉಳಿಸಿಕೊಂಡಿದೆ.
ಸನ್ ರೈಸರ್ಸ್ ಹೈದ್ರಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಲಾ 3 ಆಟಗಾರರನ್ನು ಉಳಿಸಿಕೊಂಡಿದೆ.
ಪಂಜಾಬ್ ಕಿಂಗ್ಸ್ ಕೇವಲ 2 ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ. ಈ ಪೈಕಿ ಕೆಲ ಪ್ರಾಂಚೈಸಿಗಳು ತಮಗೆ ಬೇಕಾದ ಕ್ರಿಕೆಟಿಗರಿಗೆ ಅತ್ಯಧಿಕ ಮೊತ್ತ ನೀಡಿ ಅವರನ್ನು ತಮ್ಮಲ್ಲೇ ಉಳಿಸಿಕೊಂಡಿವೆ.
ಅದು ಕೂಡ ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಪಡೆಯುವ ಸಂಭಾವನೆಗಿಂತ ಬೇರೆ ಆಟಗಾರರಿಗೆ ಹೆಚ್ಚು ಸಂಭಾವನೆ ನೀಡಲಾಗಿದೆ.
ಸಾಮಾನ್ಯವಾಗಿ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿಗೆ ಒಂದು ಪ್ರತ್ಯೇಕವಾದ ಕ್ರೇಜ್ ಇದೆ.
ಅವರ ಬ್ಯಾಟ್ ಸದ್ದು ಮಾಡಲಿ, ಮಾಡದೇ ಇರಲಿ ಅವರು ತಂಡದಲ್ಲಿದ್ದರೇ ಸಾಕು. ತಂಡದ ಬ್ರ್ಯಾಂಡ್ ಹೆಚ್ಚಾಗುತ್ತೆ ಅನ್ನೋ ಕಾರಣಕ್ಕೆ ಅವರ ಮೇಲೆ ಕೋಟಿ ಕೋಟಿ ಇನ್ವೆಸ್ಟ್ ಮಾಡ್ತಾರೆ.
ಐಪಿಎಲ್ ನ ಇತಿಹಾಸವನ್ನ ಕೆಣಕುತ್ತಾ ಹೋದರೇ ಕಿಂಗ್ ವಿರಾಟ್ ಕೊಹ್ಲಿ, ಬಾಹುಬಲಿ ಎಂ.ಎಸ್.ಧೋನಿ ಶ್ರೀಮಂತ ಕ್ರಿಕೆಟಿಗರಾಗಿದ್ದರು.
ಅಂದರೇ ಇವರಿಗೆ ಹೆಚ್ಚು ಸಂಭಾವನೆ ನೀಡಲಾಗುತ್ತಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಎಂಬ ಹೆಗ್ಗಲಿಕೆಗೂ ಪಾತ್ರರಾಗಿದ್ದರು.
ಆದ್ರೆ ಈ ಬಾರಿಯ ಮೆಗಾ ಹರಾಜು ಎಲ್ಲವನ್ನೂ ಉಲ್ಟಾ ಪಲ್ಟಾ ಮಾಡಿದೆ.
ಎಂಎಸ್ ಧೋನಿಗೆ 12 ಕೋಟಿ, ವಿರಾಟ್ ಕೊಹ್ಲಿಗೆ 15 ಕೋಟಿ ರೂ. ನೀಡಿ ಆಯಾ ತಂಡಗಳು ತಮ್ಮಲ್ಲೇ ಉಳಿಸಿಕೊಂಡಿವೆ. ಆದ್ರೆ ಈ ಆಟಗಾರರನ್ನೂ ಮೀರಿಸಿ ಕೆಲ ಆಟಗಾರರು ಹೆಚ್ಚಿನ ಮೊತ್ತ ಪಡೆದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ರವೀಂದ್ರ ಜಡೇಜಾಗೆ 16 ಕೋಟಿ ರೂ. ನೀಡಿ ತಮ್ಮಲೇ ಉಳಿಸಿಕೊಂಡಿದೆ.
ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಶಭ್ ಪಂತ್ ಗೆ 16 ಕೋಟಿ ನೀಡಿದೆ.
ಮುಂಬೈ ನಾಯಕ ರೋಹಿತ್ ಶರ್ಮಾ 16 ಕೋಟಿ ಪಡೆಯುವ ಮೂಲಕ ತಂಡದಲ್ಲಿ ಮುಂದುವರಿದಿದ್ದಾರೆ.
ಇನ್ನು ರಾಜಸ್ಥಾನ ರಾಯಲ್ಸ್ ತಂಡ ಸಂಜು ಸ್ಯಾಮನ್ಸ್ ಗೆ 14 ಕೋಟಿ ನೀಡಿದೆ. ಕೇನ್ ವಿಲಿಯಮ್ಸ್ ಗೆ ಸನ್ ರೈಜರ್ಸ್ ಹೈದರಾಬಾದ್ ತಂಡ 14 ಕೋಟಿ ರೂ ಸಂದಾಯ ಮಾಡಿದೆ.
ಇದು ಒಂದು ಕಡೆಯಾದರೇ ಈ ಬಾರಿ ಮೆಗಾ ಹರಾಜಿಗೆ ಕೆ.ಎಲ್.ರಾಹುಲ್, ರಶೀದ್ ಖಾನ್, ಹಾರ್ದಿಕ್ ಪಾಂಡ್ಯ, ಇಶನ್ ಕಿಶನ್ ರಂತಹ ಆಟಗಾರರು ಬರಲಿದ್ದಾರೆ.
ಇವರು ಎಷ್ಟು ಮೊತ್ತಕ್ಕೆ ಸೇಲ್ ಆಗುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.
ಮೂಲಗಳ ಪ್ರಕಾರ ಕೆ.ಎಲ್. ರಾಹುಲ್ ಲಖನೌ ಪ್ರಾಂಚೈಸಿ ಸೇರಲು ಬರೋಬ್ಬರಿ 20 ಕೋಟಿ ರೂಪಾಯಿ ಪಡೆದುಕೊಳ್ಳಲಿದ್ದಾರಂತೆ.









