IPL 2022 : ಅಭಿಮಾನಿಯನ್ನ ನೋಡಿ ಕೊಹ್ಲಿ ರಿಯಾಕ್ಸನ್ ಹೇಗಿತ್ತು ಗೊತ್ತಾ..?
ಮ್ಯಾಚ್ ಎಷ್ಟೆ ಸಿರಿಯಸ್ ಆಗಿ ನಡೆಯುತ್ತಿದ್ದರೂ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ಆಟಗಾರನನ್ನ ನೋಡಲು ಕಾತರದಿಂದ ಇರುತ್ತಾರೆ.
ಆದ್ರೆ ಮ್ಯಾಚ್ ಸಂದರ್ಭದಲ್ಲಿ ಅದು ಸಾಧ್ಯವಾಗುದಿಲ್ಲ ಅಂತಾ ಸಾಕಷ್ಟು ಅಭಿಮಾನಿಗಳು ಆ ಕೋರಿಕೆಯನ್ನ ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ.
ಆದಾಗ್ಯೂ ಕೆಲವರು ಮ್ಯಾಚ್ ಮಧ್ಯೆಯೂ ಮೈದಾನಕ್ಕೆ ಇಳಿದು ತಮ್ಮ ನೆಚ್ಚಿನ ಆಟಗಾರನತ್ತ ನುಗ್ಗುತ್ತಾರೆ. ಅದರಂತೆ ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿಯೂ ನಡೆದಿದೆ.

ಲಕ್ನೋ ಬ್ಯಾಟಿಂಗ್ ಸಮಯದಲ್ಲಿ ಆರ್ ಸಿಬಿ ಆಟಗಾರ ಕೊಹ್ಲಿ ಬೌಂಡರಿ ಲೈನ್ ನಲ್ಲಿದ್ದರು. ಆಗ ವಿರಾಟ್ ನತ್ತ ಒಬ್ಬ ಅಭಿಯಾನಿ ಓಡಿ ಬರುತ್ತಿದ್ದರು.
ಅದನ್ನ ಗಮನಿಸಿದ ಕೊಹ್ಲಿ, ಅವರಿಂದ ದೂರ ಹೋದರು. ಅಲ್ಲದೇ ಸೆಕ್ಯೂರಿಟಿ ಅವರನ್ನ ಕರೆದರು. ಕೂಡಲೇ ಮೈದಾನಕ್ಕೆ ಬಂದ ಸೆಕ್ಯೂರಿಟಿ ವ್ಯಕ್ತಿ, ಓಡೋಡಿ ಬರುತ್ತಿದ್ದ ವ್ಯಕ್ತಿಯನ್ನ ಭುಜದ ಮೇಲೆ ಹಾಕಿಕೊಂಡು ಹೋದರು. ಇದನ್ನ ನೋಡಿದ ವಿರಾಟ್ ಕೊಹ್ಲಿ ಒಂದು ಕ್ಷಣ ಶಾಕ್ ಆದರು.
ಆನಂತರ ಅಭಿಮಾನಿಗಳತ್ತ ತಿರುಗಿ ಜಾನ್ ಸಿನಾ ಸ್ಟೈಲ್ ನಲ್ಲಿ ರಿಯಾಕ್ಷನ್ ಕೊಟ್ಟರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. kohli-hillarious-reaction-after-police-takes-intruder-out








