ರಾಂಚಿ : ಭರ್ಜರಿ ಫಾರ್ಮ್ ನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿ ಮಿಂಚಿದ್ದು, ಸದ್ಯ ದಾಖಲೆಯ ಸನಿಹದಲ್ಲಿದ್ದಾರೆ.
ಜೈಸ್ವಾಲ್ ಸದ್ಯದಲ್ಲಿಯೇ ವಿರಾಟ್ ಕೊಹ್ಲಿ ಅವರ ಅಪರೂಪದ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ಗಳಿಸಿದ ಭಾರತ ತಂಡದ 3ನೇ ಆಟಗಾರ ಎಂಬ ಹೆಗ್ಗಳಿಕೆ ಗಳಿಸುವ ಸನಿಹದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ನ ಸರಣಿಯೊಂದರಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ಗಳ ಪೈಕಿ 774 ರನ್ ಗಳಿಸಿರುವ ಸುನೀಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಯಶಸ್ವಿ ಸದ್ಯ 3 ಪಂದ್ಯಗಳಲ್ಲಿ 545 ರನ್ ಗಳಿಸಿರುವ ಯಶಸ್ವಿ ಜೈಸ್ವಾಲ್, ಇನ್ನೂ ಇನ್ನೂ 147 ರನ್ ಗಳಿಸಿದರೆ ಕೊಹ್ಲಿ ದಾಖಲೆ ಮುರಿಯಲಿದ್ದಾರೆ.
ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಆಡಿರುವ 3 ಪಂದ್ಯಗಳಲ್ಲಿ 6 ಇನ್ನಿಂಗ್ಸ್ ಆಡಿ 109 ಸರಾಸರಿಯಲ್ಲಿ ಒಟ್ಟು 545 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ದ್ವಿಶತಕ, 1 ಅರ್ಧಶತಕ ಸೇರಿವೆ. ಅಲ್ಲದೇ, ಸದ್ಯ ಸದ್ಯ 2023-25ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಲ್ಲಿ ಟಾಪ್ನಲ್ಲಿದ್ದಾರೆ. ಅತಿಹೆಚ್ಚು ಸ್ಕೋರರ್, ಉತ್ತಮ ಸರಾಸರಿ, ಅತಿಹೆಚ್ಚು ರನ್, ಅತಿಹೆಚ್ಚು ಸ್ಟ್ರೈಕ್ರೇಟ್, ಹೆಚ್ಚು ಬಾರಿ 50+ ರನ್ ಗಳಿಸಿದವರು, ಹೆಚ್ಚು ಬಾರಿ ಶತಕ ಸಿಡಿಸಿದವರು, ಹೆಚ್ಚು ಬೌಂಡರಿ, ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲೂ ಯಶಸ್ವಿ ಮುಂದೆ ಇದ್ದಾರೆ.