Kohli-Siraj : ಸಿರಾಜ್ ಬೌಲಿಂಗ್.. ಕ್ಯಾಪ್ಟನ್ ರೋಹಿತ್.. ವಿರಾಟ್ ಸಲಹೆ
ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಪಂದ್ಯದಲ್ಲಿ ಒಂದು ಆಸಕ್ತಿದಾಯಕ ಘಟನೆವೊಂದು ನಡೆದಿದೆ.
ವಿರಾಟ್ ಕೊಹ್ಲಿ, ಮೊಹ್ಮದ್ ಸಿರಾಜ್ ನಡುವೆ ಇರುವ ಅನುಬಂಧದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ.
ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ತುಂಬಾ ಮ್ಯಾಚ್ ಗಳನ್ನು ಆಡಿರುವ ಸಿರಾಜ್, ವಿರಾಟ್ ಮಾರ್ಗದರ್ಶನದಲ್ಲಿ ಸಾಕಷ್ಟು ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
ಇದೀಗ ಮತ್ತೊಮ್ಮೆ ಕೊಹ್ಲಿ ನೀಡಿದ ಸಲಹೆಯೊಂದಿಗೆ ಸಿರಾಜ್ ಮತ್ತೊಮ್ಮೆ ಸಕ್ಸಸ್ ಕಂಡಿದ್ದಾರೆ.
ಆರಂಭದಲ್ಲಿಯೇ ಶಮಿ ಬೌಲಿಂಗ್ ನಲ್ಲಿ ಜೇಸನ್ ರಾಯ್ ಬ್ಯಾಕ್ ಟು ಬ್ಯಾಕ್ ಬೌಂಡರಿಗಳನ್ನು ಬಾರಿಸಿ ಟೀಂ ಇಂಡಿಯಾಗೆ ಎಚ್ಚರಿಕೆಯನ್ನ ನೀಡಿದ್ರು.

ಆದ್ರೆ ಮತ್ತೊಂದು ಓವರ್ ನಲ್ಲಿ ಸಿರಾಜ್ ಇಂಗ್ಲೆಂಡ್ ಗೆ ಶಾಕ್ ನೀಡಿದರು. ಓಪನರ್ ಜಾನಿ ಬೈರ್ ಸ್ಟೋ ಅವರನ್ನ ಡಕೌಟ್ ಮಾಡಿ ಪೆವಿಲಿಯನ್ ಗೆ ಸೇರಿಸಿದ್ರು.
ಆ ನಂತರ ರೂಟ್ ಗೂ ಶಾಕ್ ನೀಡಿ ವಿಕೆಟ್ ಪಡೆದುಕೊಂಡರು. ಆದ್ರೆ ರೂಟ್ ಕ್ರೀಸ್ ಗೆ ಬಂದಾಗ ವಿರಾಟ್ ಕೊಹ್ಲಿ ಸಿರಾಜ್ ಬಳಿಗೆ ಬಂದು ಲೈನ್ ಅಂಡ್ ಲೆಂಥ್ ನಲ್ಲಿ ಆಫ್ ಸ್ಟಂಪ್ ಗೆ ದೂರವಾಗಿ ಚೆಂಡು ಎಸೆಯುವಂತೆ ಸಲಹೆ ನೀಡಿದರು.
ಕೊಹ್ಲಿ ಸೂಚನೆಯಂತೆ ಬೌಲಿಂಗ್ ಮಾಡಿದ ಸಿರಾಜ್, ಒಳ್ಳೆ ಫಲಿತಾಂಶ ಪಡೆದುಕೊಂಡರು.
ಇದರೊಂದಿಗೆ ವಿಕೆಟ್ ಬೀಳುತ್ತಿದ್ದಂತೆ ವಿರಾಟ್ ಕಡೆ ನೋಡುತ್ತಾ ನೋಡಿದ್ರಾ ನಿಮ್ಮ ವ್ಯೂಹ ಫಲಿಸಿತು ಅಂತಾ ಸನ್ನೆ ಮಾಡಿದ್ರು.
ಆ ನಂತರ ವಿರಾಟ್ ಕೊಹ್ಲಿ ಓಡಿ ಬಂದು ಸಿರಾಜ್ ಅವರನ್ನ ಅಪ್ಪಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.