ಐಪಿಎಲ್ ನ 17ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರು ತಂಡ ಸೋಲು ಕಂಡಿದೆ. ಆದರೆ, ಈ ಪಂದ್ಯದಲ್ಲಿ ಕೊಹ್ಲಿಯ ಸನ್ನೆ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಚೆನ್ನೈ 18.4 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಈ ಪಂದ್ಯದಲ್ಲಿಯೇ ಘಟನೆಯೊಂದು ನಡೆದಿದ್ದು, ಅದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಚೇಸ್ ಮಾಡುವ ವೇಳೆ, ರಚಿನ್ ರವೀಂದ್ರ ಔಟಾದಾಗ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬೇಸರ ವ್ಯಕ್ತಪಿಡಿಸುತ್ತಿದ್ದಾರೆ. ರಚಿನ್‌ಗೆ ಎಕ್ಸ್-ರೇಟೆಡ್ ಸೆಂಡ್-ಆಫ್‌ನಲ್ಲಿ ತಮ್ಮ ಬೆರಳಿನಿಂದ ಸನ್ನೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿದೆ.