Surya Kumar | ಕೊಹ್ಲಿ ಸ್ಲೆಡ್ಜಿಂಗ್ ಬೇರೆ ಲೆವೆಲ್.. ಎದೆ ಬಡಿತ ಜಾಸ್ತಿ ಆಗಿತ್ತು

1 min read
kohlis-sledging-was-another-level-suryakumar saaksha tv

Surya Kumar | ಕೊಹ್ಲಿ ಸ್ಲೆಡ್ಜಿಂಗ್ ಬೇರೆ ಲೆವೆಲ್.. ಎದೆ ಬಡಿತ ಜಾಸ್ತಿ ಆಗಿತ್ತು

ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಮೆಷಿನ್ ಗನ್ ವಿರಾಟ್ ಕೊಹ್ಲಿ ಬಗ್ಗೆ ಕೆಲವು ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಬೇರೆ ಹಂತದಲ್ಲಿರುತ್ತೆ, ನಾವು ಸಹಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ.

ಗೌರವ್ ಕಪೂರ್ ನಡೆಸಿಕೊಡುವ ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ಎಂಬ ಯೂಟ್ಯೂಬ್ ಶೋನಲ್ಲಿ ಸೂರ್ಯಕುಮಾರ್ ಈ ಕಾಮೆಂಟ್ ಮಾಡಿದ್ದಾರೆ.

2020ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ನಡುವೆ ನಿರ್ಣಾಯಕ ಪಂದ್ಯ ನಡೆದಿತ್ತು.

ಆ ಪಂದ್ಯದಲ್ಲಿ ಕೊಹ್ಲಿ ಜತೆಗಿನ ಅನುಭವವನ್ನು ಸೂರ್ಯ ಮೆಲುಕು ಹಾಕಿದ್ದಾರೆ.

ನಾವು ”165 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದಿದ್ವಿ. ಆದರೆ, ಎರಡು ವಿಕೆಟ್ ಕಳೆದುಕೊಂಡಾಗ, ನಮ್ಮ ಚೇಸಿಂಗ್ ಸ್ವಲ್ಪ ಸ್ಲೋ ಆಗಿ ಮುಂದುವರಿಯುತ್ತೆ.

ಹೇಗಾದರೂ ಮಾಡಿ ಪಂದ್ಯ ಗೆಲ್ಲಲೇಬೇಕೆಂಬ ಹಠದಿಂದ ಯಾರೇ ಏನೇ ಮಾಡಿದರೂ ನನ್ನ ಬ್ಯಾಟಿಂಗ್ ಫೋಕಸ್ ಕಳೆದುಕೊಳ್ಳಬಾರದು ಎಂದು ಅಂದುಕೊಂಡೆ.

ಆದರೆ ಕೊಹ್ಲಿ ನನ್ನ ಎದುರು ನಿಂತಿದ್ದರು. ಮೈದಾನದಲ್ಲಿದ್ದರೆ ಕೊಹ್ಲಿಯ ಸ್ಲೆಡ್ಜಿಂಗ್ ಬೇರೆ ಲೆವೆಲ್ ಅಲ್ಲಿರುತ್ತೆ.  ಕೊಹ್ಲಿ ಜಿದ್ದಾಜಿದ್ದಿನಿಂದ ಸ್ಲೆಡ್ಜಿಂಗ್ ಮಾಡೋಕೆ ಇಳಿದ್ರೆ ಸಹಿಸಿಕೊಳ್ಳೋದು ತುಂಬಾ ಕಷ್ಟಕರವಾಗಿತ್ತೆ.

kohlis-sledging-was-another-level-suryakumar saaksha tv

ಇದು ಕೊಹ್ಲಿಗೆ ಒಂದು ರೀತಿಯ ಶಕ್ತಿಯಂತೆ. ಕೊಹ್ಲಿ ತನ್ನ ನಡೆಯಿಂದ ಎದುರಾಳಿ ತಂಡದ ಬ್ಯಾಟರ್ ಗಳನ್ನು ಕನ್ಫ್ಯೂಸ್ ಮಾಡುತ್ತಾರೆ.  ಹೀಗಾಗಿಯೇ ಅವರ ಮಾಯೆಯಲ್ಲಿ ಬೀಳಬಾರದು ಎಂದು ನಿರ್ಧರಿಸಿದ್ದೆ.

ಉಭಯ ತಂಡಗಳಿಗೆ ಇದು ನಿರ್ಣಾಯಕ ಪಂದ್ಯವಾಗಿತ್ತು. ಗೆದ್ದ ತಂಡ ಫೈನಲ್ ಗೆ, ಸೋತ ತಂಡ ಮನೆಗೆ ಹೋಗುತ್ತೆ. ಈ ಪರಿಸ್ಥಿತಿಯಲ್ಲಿ ಕೊಹ್ಲಿ ಕಣ್ಣಿಗೆ ಬೀಳಬಾರದು ಎಂಬ ಉದ್ದೇಶದಿಂದ ಬ್ಯಾಟಿಂಗ್ ಮುಂದುವರಿಸಿದೆ.

ಕೊಹ್ಲಿ ನನ್ನ ಮುಂದೆ ನಿಂತಾಗ ನಾನು ತಲೆತಗ್ಗಿಸಿಕೊಂಡು ಬ್ಯಾಟ್ ಮಾಡಿದೆ. ಇದರಿಂದ ನನ್ನ ಫೋಕಸ್ ಕಳೆದುಕೊಳ್ಳಲಿಲ್ಲ. ನಾನು ಬ್ಯಾಟಿಂಗ್ ಮಾಡುವವರೆಗೂ ಕೊಹ್ಲಿ ಏನೂ ಮಾತನಾಡಲಿಲ್ಲ. 

ಒಂದು ಸಂದರ್ಭದಲ್ಲಿ ವಿರಾಟ್ ನನ್ನ ಬಳಿಗೆ ಬಂದರು. ಆಗ ನನ್ನ ಎದೆಬಡಿತ ಹೆಚ್ಚಾಗಿತ್ತು.

ಅದೇ ಸಮಯಕ್ಕೆ ನನ್ನ ಬ್ಯಾಟ್ ಕೆಳಗೆ ಬಿದ್ದಿದ್ದರಿಂದ ಏನೂ ಮಾತನಾಡದೆ ಬ್ಯಾಟ್ ತೆಗೆದುಕೊಳ್ಳಲು ಬಾಗಿದೆ.

ಕೊಹ್ಲಿ ಮುಗುಳ್ನಕ್ಕು ಅಲ್ಲಿಂದ ಹೊರಟರು ಎಂದು ಸೂರ್ಯಕುಮಾರ್ ನೆನಪು ಮಾಡಿಕೊಂಡಿದ್ದಾರೆ. kohlis-sledging-was-another-level-suryakumar

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd