ಕೊಳದ ಮಠದ ಶಾಂತವೀರ ಸ್ವಾಮಿಜಿ ಲಿಂಗೈಕ್ಯ
ಬೆಂಗಳೂರು: ಬೆಂಗಳೂರಿನ ಕೊಳದ ಮಠದ ಪರಮ ಪೂಜ್ಯ ಶಾಂತವೀರ ಸ್ವಾಮಿಜಿ ಇಂದು (ಶನಿವಾರ) ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.
80 ವರ್ಷದ ಶಾಂತವೀರ ಸ್ವಾಮಿಜಿ ಬೆಳಗಿನ ಜಾವ ನಿಧರಾಗಿದ್ದಾರೆ ಎಂದು ಸ್ವಾಮೀಜಿ ಅವರ ಅಣ್ಣನ ಮಗ ಹರ್ಷ ಮಾಹಿತಿ ನೀಡಿದ್ದಾರೆ. ಸ್ವಾಮೀಜಿ ನಿನ್ನೆ ಆರಾಮಾಗಿಯೇ ಇದ್ದರು. ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಇಂದು ಬೆಳಿಗ್ಗೆ ನಾನು ಮಠಕ್ಕೆ ಬಂದು ನೋಡಿದಾಗ ಅವರು ನಿಧನರಾಗಿದ್ದರು. ಯಾವಾಗ? ಎಷ್ಟೊತ್ತಿಗೆ ಪ್ರಾಣ ಬಿಟ್ಟಿದ್ದಾರೆ ಎಂದು ಗೊತ್ತಿಲ್ಲ. ಬೆಳಗಿನ ಜಾವ ಪ್ರಾಣ ಹೋಗಿರಬುಹುದು ಎಂದು ತಿಳಿಸಿದ್ದಾರೆ.








