kolar ಚಿನ್ನದನಾಡಲ್ಲಿ ಬೈಕ್ ವ್ಹೀಲಿಂಗ್ ಹುಚ್ಚಾಟ
kolar ಕೋಲಾರ : ಚಿನ್ನದ ನಾಡು ಕೋಲಾರದಲ್ಲಿ ವ್ಹೀಲಿಂಗ್ ಗುಂಪುಗಳ ಕಿರಿಕಿರಿ ಮಿತಿಮೀರಿದೆ.
ಬೆಂಗಳೂರು ತಿರುಪತಿ ರಾಷ್ಟ್ರೀಯ ಹೆದ್ದಾರಿಯ ನರಸಾಪುರ ಕೈಗಾರಿಕಾ ವಲಯದ ಬಳಿ ಯುವಕರ ಗುಂಪು ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ.
ಸವಾರನೊಬ್ಬ ಬೈಕ್ ಮೇಲೆ ಒಂದು ಕಾಲಿನಲ್ಲಿ ನಿಂತು ಒಂದೇ ಚಕ್ರದಲ್ಲಿ ಬೈಕ್ ಚಲಾಯಿಸಿದ್ದಾನೆ.
ಈ ದೃಶ್ಯಾವಳಿಗಳನ್ನ ತನ್ನ ಸ್ನೇಹಿತರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ವ್ಹೀಲಿಂಗ್ ಹುಚ್ಚಾಟದಿಂದ ಅಕ್ಕಪಕ್ಕದ ವಾಹನ ಚಾಲಕರು ಆತಂಕದಲ್ಲಿಯೇ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ.
ಈ ಹಿನ್ನೆಲೆಯಲ್ಲಿ ವ್ಹೀಲಿಂಗ್ ಮಾಡುವ ಪುಂಡರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
