Kolar ಕೋಲಾರ : ಅನಾಥಾಶ್ರಮದ 27 ಮಕ್ಕಳಿಗೆ ಕೋವಿಡ್ ಪಾಸಿಟಿವ್
Kolar ಕೋಲಾರ : ಚಿನ್ನದ ನಾಡು ಕೋಲಾರದಲ್ಲಿ ಕೊರೊನಾ ಸ್ಫೋಟಗೊಂಡಿದೆ.
ಜಿಲ್ಲೆ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕುಪ್ಪ ಬಳಿ ಇರುವ ಅನಾಥಾಶ್ರಮದ 27 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಬಜೇರಿಯಾ ಟ್ರಸ್ಟ್ ನಿಂದ ನಡೆಸುತ್ತಿರುವ ಆಶ್ರಮ ಇದಾಗಿದ್ದು, ಆಶ್ರಮದಲ್ಲಿ 60 ಕ್ಕೂ ಹೆಚ್ಚು ಜನ ಮಕ್ಕಳಿದ್ದಾರೆ.
ಒಂದು ವಿದ್ಯಾರ್ಥಿನಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿದ ಹಿನ್ನೆಲೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಟೆಸ್ಟ್ ನಲ್ಲಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕೂಡಲೇ ಎಲ್ಲಾ ಮಕ್ಕಳಿಗೂ ಟೆಸ್ಟ್ ಮಾಡಿಸಲಾಗಿತ್ತು. ಇಂದು ಟೆಸ್ಟ್ ರಿಸಲ್ಟ್ ಬಂದಿದ್ದು, 26 ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಸದ್ಯ ಎಲ್ಲಾ ಮಕ್ಕಳನ್ನು ಕೋಲಾರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
