ಕೋಲಾರ Kolar | ಕೃಷಿ ಹೊಂಡದಲ್ಲಿ ಬಿದ್ದು ಸಹೋದರಿಯರು ಸಾವು
ಕೋಲಾರ : ಕೃಷಿ ಹೊಂಡದಲ್ಲಿ ಬಿದ್ದು ಸಹೋದರಿಯರು ಮೃತಪಟ್ಟಿರುವ ಘಟನೆ ಕೋಲಾರ ಹೊರವಲಯದ ಕೋಡಿಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಡಿಗೆನಹಳ್ಳಿ ಗ್ರಾಮದ ರಾಜೇಂದ್ರ, ಸುಮಿತ್ರಮ್ಮ ದಂಪತಿಯ ಮಕ್ಕಳಾದ ಅನುಷ್ಯ (12) ಮತ್ತು ವೆನ್ನಲ್ಲ (10) ಮೃತರಾಗಿದ್ದಾರೆ.
ಮೃತ ಸಹೋದರಿಯರು ತಮ್ಮ ಮನೆಯ ಸೀಮೆ ಹಸುಗಳಿಗೆ ಹುಲ್ಲು ತರಲು ಜಮೀನತ್ತ ಹೋಗಿದ್ದರು.
ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಬಾಲಕಿಯರ ಮೃತದೇಹವನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಸಂಬಂಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.