Koppal | ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು
1 min read
koppal-Gavisiddheshwar Swamiji tears saaksha tv
Koppal | ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು
ಕೊಪ್ಪಳ : ಕೊಪ್ಪಳದ ಗವಿಮಠ ಆವರಣದಲ್ಲಿ ಆಯೋಜಿಸಿದ್ದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ಭಾವುಕರಾಗಿ ಕಣ್ಣಿರಾಕಿದ್ದಾರೆ.
5 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ, ಪ್ರಸಾದ ನಿಲಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಸತಿ ನಿಲಯ ನಡೆದು ಬಂದ ದಾರಿಯನ್ನು ನೆನೆದು ಗವಿಶ್ರೀ ಕಣ್ಣೀರಾಕಿದ್ದಾರೆ.
ನನ್ನ ಜೋಳಿಗೆಗೆ ಶಕ್ತಿ ಕೊಡಲಿ ಎಂದು ಗವಿಸಿದ್ದೇಶ್ವರ ಶ್ರೀ ಭಾವುಕರಾಗಿದ್ದಾರೆ.
ಮರಿ ಶಾಂತವೀರ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ನಿಮಿತ್ಯ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಶ್ರೀಗಳು, ಮರಿ ಶಾಂತವೀರ ಮಹಾಸ್ವಾಮಿಗಳು ಮೊದಲು ಭಿಕ್ಷೆ ಬೇಡಿ ವಸತಿ ನಿಲಯ ಮಾಡಿದ್ರು.

2 ರೂಪಾಯಿ ಭಿಕ್ಷೆ ಬೇಡಿ ವಸತಿ ನಿಲಯ ಮಾಡಿದ್ದಾರೆ.
ಮಕ್ಕಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು ಎಂದು ಮರಿಶಾಂತವೀರ ಶ್ರೀಗಳನ್ನ ನೆನೆದು ಕಣ್ಣೀರು ಹಾಕಿದ್ದಾರೆ.
ನಾನು ಸಾವಿರಾರು ಬಡ ಮಕ್ಕಳಿಗೆ ವಸತಿ ನಿಲಯ ಮಾಡಲು ಸಂಕಲ್ಪ ಮಾಡಿದ್ದೇನೆ.
ಜೋಳಿಗೆಯಲ್ಲಿ ಶಕ್ತಿ ಕೊಟ್ಟಷ್ಟು ಮಕ್ಕಳನ್ನು ಓದಿಸುತ್ತೇನೆಂದರು.
160 ಮಕ್ಕಳಿಂದ ಇದೀಗ 3.5 ಸಾವಿರ ಮಕ್ಕಳಿದ್ದಾರೆ. ಎಲ್ಲೆಲ್ಲಿ ಮಠದಲ್ಲಿ ಜಾಗ ಇದೆ ಅಲ್ಲಿ ಮಕ್ಕಳನ್ನ ಹಾಕಿದ್ದಾರೆ.
ಅವರಿಗಾಗಿಯೇ ಈ ವಸತಿ, ಪ್ರಸಾದ ನಿಲಯ ಇದೆ ಎಂದು ಗವಿಶ್ರೀ ಹೇಳಿದ್ದಾರೆ.