ಕೊಪ್ಪಳ : ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ನವಲಿ ಗ್ರಾಮದ ಬಳಿಯ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ನಡೆದಿದೆ,.
ಮದುವೆ ನಿಶ್ಚಯ ಮಾಡಲು ಹೊರಟಿದ್ದ ಟ್ರ್ಯಾಕ್ಟರ್ ಆಯ ತಪ್ಪಿ ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ. ಕಾರಟಗಿಯಿಂದ ಕನಕಗಿರಿ ತಾಲೂಕಿನ ಶಿರವಾರ ಗ್ರಾಮಕ್ಕೆ ಹೊರಟಿದ್ದ ಟ್ರ್ಯಾಕ್ಟರ್ ಇದಾಗಿದೆ..
ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ..
ಯಮನೂರಪ್ಪ ಸಿಂಧನೂರು (55), ಅಂಬಮ್ಮ (45) ಸ್ಥಳದಲ್ಲೇ ಸಾವನಪ್ಪಿದ್ದಾರೆ. ದ್ಯಾವಮ್ಮ (60) ಶೇಶಪ್ಪ ಬಂಡಿ (40) ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.. ಮೃತರು ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ಇಂದಿರಾನಗರದ ನಿವಾಸಿಗಳು ಎನ್ನಲಾಗಿದೆ..
ಗಾಯಾಳುಗಳನ್ನ ಕಾರಟಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗ್ತಿದೆ..
25ಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ದ ಟ್ರ್ಯಾಕ್ಟರ್ ಅಪಘಾತಕ್ಕೀಡಾಗಿದೆ.








