Kraigg Brathwaite | ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ವಿಂಡೀಸ್ ಕ್ಯಾಪ್ಟನ್..!?
ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರೇಗ್ ಬ್ರಾಥ್ವೈಟ್ ಅವರು ಕ್ರಿಕೆಟ್ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು ಕಬಳಿಸಿದ ದಾಖಲೆ ಬರೆದಿದ್ದಾರೆ. ಅರ್ರೆ ಇದೇನು..? ಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಈ ಕ್ರೇಗ್ ಬ್ರಾಥ್ವೈಟ್ ಎಲ್ಲಿಂದ ಬಂದರು ಎಂದು ಚಿಂತಿಸಬೇಡಿ.
ಬ್ರಾಥ್ವೈಟ್ ಮಾಡಿರುವ ಸಾಧನೆಯೇ ವಿಭಿನ್ನವಾಗಿದೆ. ಬ್ರಾಥ್ ವೈಟ್ ಟ್ಸ್ಮನ್ ಅನ್ನು ಪುನರಾವರ್ತಿಸದೆ ಟೆಸ್ಟ್ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಅಂದರೆ ಬ್ರಾಥ್ವೈಟ್ ಇದುವರೆಗೆ 77 ಟೆಸ್ಟ್ಗಳಲ್ಲಿ 25 ವಿಕೆಟ್ ಪಡೆದಿದ್ದಾರೆ. ಈ 25 ವಿಕೆಟ್ಗಳು 25 ಬ್ಯಾಟ್ಸ್ಮನ್ಗಳು ಎಂಬುದು ಇಲ್ಲಿನ ವಿಶೇಷ. ಅಂದರೆ ಬ್ರಾತ್ವೈಟ್ ಪಡೆದ 25 ವಿಕೆಟ್ಗಳಲ್ಲಿ ಒಂದೂ ಪುನರಾವರ್ತನೆಯಾಗಿಲ್ಲ. ಸಾಮಾನ್ಯವಾಗಿ ಒಬ್ಬ ಬೌಲರ್, ಪದೇ ಪದೇ ಒಬ್ಬ ಬ್ಯಾಟರ್ ವಿಕೆಟ್ ಪಡೆದಿರುತ್ತಾನೆ. ಹೆಚ್ಚಿನ ಸಂದರ್ಭಗಳಲ್ಲಿ ಬೌಲರ್ಗಳು ಮೊದಲ 25 ವಿಕೆಟ್ಗಳಲ್ಲಿ ಪುನರಾವರ್ತಿತ ಬ್ಯಾಟ್ಸ್ಮನ್ಗಳನ್ನು ಬಲಿ ಪಡೆದಿರುತ್ತಾರೆ.
ಇದಕ್ಕೂ ಮುನ್ನ ಈ ದಾಖಲೆ ಬಾಂಗ್ಲಾದೇಶದ ಬೌಲರ್ ಮೊಹಮ್ಮದ್ ಅಶ್ರಫುಲ್ ಹೆಸರಿನಲ್ಲಿತ್ತು. ಅಶ್ರಫುಲ್ 21 ವಿಕೆಟ್ ಪಡೆದಿದ್ದಾರೆ..