ಬಿಜೆಪಿ ಒಂದು ಕುಟುಂಬ ಇದ್ದಂತೆ : ಕೆ.ಎಸ್.ಈಶ್ವರಪ್ಪ
ದಾವಣಗೆರೆ : ಬಿಜೆಪಿ ಒಂದು ಕುಟುಂಬ ಇದ್ದಂತೆ. ರಾಜಕೀಯ ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಒಂದು ಕುಟುಂಬ ಇದ್ದಂತೆ. ಒಂದು ರಾಜಕೀಯ ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತದೆ.
ಅರುಣ್ ಸಿಂಗ್ ನಮ್ಮ ನಮ್ಮ ಅಭಿಪ್ರಾಯ ಹೇಳುವಂತಹ ಅವಕಾಶ ನೀಡಿದರು. ಇದೊಂದು ವಿಶೇಷ ಪದ್ದತಿ, ಯಾವ ಪಕ್ಷದಲ್ಲಿ ಕೂಡ ಇಲ್ಲ.
ಸಭೆಯಲ್ಲಿ ಕೇವಲ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆ ಮಾತ್ರವಲ್ಲ. ಕೊರೊನಾ ಸಂಕಷ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಆಗಿದೆ ಎಂದು ತಿಳಿಸಿದರು.
ಇನ್ನು ರಾಜ್ಯ ಉಸ್ತುವಾರಿಗಳು ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಚಾರವನ್ನೇ ಚರ್ಚೆ ಮಾಡಿದ್ದಾರೆ ಅಂತ ಅಲ್ಲ. ಗೊಂದಲ ಇರುವ ವ್ಯಕ್ತಿಗಳ ಜೊತೆ ಕೂತು ಚರ್ಚೆ ಮಾಡಿದ್ದಾರೆ.
ಅದಕ್ಕಿಂತ ಮುಖ್ಯವಾಗಿ ಕೊರೊನಾ ಸಂದರ್ಭದಲ್ಲಿ ಯಾವ ರೀತಿ ನಿರ್ವಹಣೆ, ನಾಳೆ ಯೋಗ ದಿನಾಚರಣೆ ಬಗ್ಗೆ ಚರ್ಚೆ ಮಾಡಲಾಗಿದೆ.
ಈಗ ನಾಯಕತ್ವ ಬದಲಾವಣೆ ಮುಗಿದ ವಿಚಾರ ಕೈ ಬಿಡ್ಬೇಕು ಎಂದು ನೇರವಾಗಿ ಹೇಳಿದ್ದಾರೆ ಎಂದು ಅರುಣ್ ಸಿಂಗ್ ಭೇಟಿ ಬಗ್ಗೆ ವಿವರಿಸಿದರು.
ಇದೆ ವೇಳೆ ಕೊರೊನಾ ಹಿನ್ನಲೆಯಲ್ಲಿ ಡಿಸೆಂಬರ ತನಕ ತಾಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣೆ ನಡೆಯಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.










