KSRTC : ಮುಂದಿನ 6 ತಿಂಗಳ ಕಾಲ ಮುಷ್ಕರ ನಡೆಸದಂತೆ ಆದೇಶ : ಸಾರಿಗೆ ನೌಕರರಿಗೆ ಸರ್ಕಾರದ ಶಾಕ್ …
ಮುಂದಿನ 6 ತಿಂಗಳುಗಳ ಕಾಲ ಮುಷ್ಕರ ನಡೆಸದಂತೆ ಆದೇಶಿಸಿ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಕರ್ನಾಟಕ ಆಗತ್ಯ ಸೇವಾ ನಿರ್ವಾಹಣೆ ಕಾಯ್ದೆ 2013 ರ ಅಡಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇಂದು ಆದೇಶವನ್ನ ಹೊರಡಿಸಿದೆ. ಇದರೊಂದಿಗೆ ಸರ್ಕಾರಕ್ಕೆ ಶಾಕ್ ನೀಡಲು ಮುಂದಾಗಿದ್ದ ಸಾರಿಗೆ ನೌಕರರಿಗೆ ಕೆಎಸ್ಆರ್ಟಿಸಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ.
2023ರ ಜ.1ರಿಂದ 2023ರ ಜೂ.30ರವರೆಗೆ ನಿಗಮದಲ್ಲಿ ಮುಷ್ಕರ ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದ್ದು,. ಈ ಸಂಬಂಧ ಸರ್ಕಾರದ ಅಧಿಸೂಚನೆ ಪ್ರತಿಯನ್ನ ಎಲ್ಲ ಘಟಕ, ಕಾರ್ಯಗಾರ, ಕಚೇರಿ ಬಸ್ ನಿಲ್ದಾಣಗಳ ಸೂಚನ ಫಲಕಗಳಲ್ಲಿ ತಪ್ಪದೆ ಪ್ರಕಟಿಸುವಂತೆ ಸೂಚನೆ ನೀಡಿದೆ. ಅಲ್ಲದೇ ಕಾರ್ಮಿಕ ಸಂಘಟನೆಗಳಿಗೂ ಪ್ರತಿ ತಲುಪಿಸುವಂತೆ ಸರ್ಕಾರ ಸೂಚಿಸಿದೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಚುನಾವಣೆ ಸಂದರ್ಭದಲ್ಲಿ ಸರ್ಕಾರಕ್ಕೆ ಸಾರಿಗೆ ನೌಕರರು ತಲೆ ಬಿಸಿಯಾಗಿದ್ದರು. ಆದ್ರೆ, ಇದೀಗ ಈ ಆದೇಶ ಹೊರಡಿಸುವ ಮೂಲಕ ಸಾರಿಗೆ ನೌಕರರ ಮುಷ್ಕರವನ್ನ ಹತ್ತಿಕುವ ಪ್ರಯತ್ನ ಮಾಡುತ್ತಿದೆ.
ಕರ್ನಾಟಕ ರಾಜ್ಯ ಸಾರಿಗೆ ನೌಕರರಿಗೆ ಸಮಾನ ವೇತನ ನೀಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿ. 19ರಿಂದ ಬೆಳಗಾವಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ.
ವಜಾಗೊಂಡ ನೌಕರರ ಮರು ನೇಮಕ, ವರ್ಗಾವಣೆಯಂತ ಶಿಕ್ಷೆ ರದ್ದು ಮಾಡಿ ಪೊಲೀಸ್ ಪ್ರಕರಣ ಹಿಂಪಡೆಯಬೇಕು ಎಂದು ನೌಕರರ ಪ್ರತಿಭಟನೆ ನಡೆಸುತ್ತಿದ್ದಾರೆ.
KSRTC : Order not to go on strike for next 6 months : Govt shock for transport employees…