KSRTC ಬಸ್ ನಿಲ್ಲಿಸದ ಹಿನ್ನೆಲೆ ಬಸ್ ತಡೆದು ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಬಾಗಲಕೋಟೆ : KSRTC ಬಸ್ ನಿಲ್ಲಿಸದ ಹಿನ್ನೆಲೆ , ಬಸ್ ತಡೆದು ಶಾಲಾ-ಕಾಲೇಜ್ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ..
ಬಂಡಿಗಣಿ ಕ್ರಾಸ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ..
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣೆಯಲ್ಲಿ ಘಟನೆ ನಡೆದಿದೆ..
ವಿದ್ಯಾರ್ಥಿಗಳು ದಿನಂಪ್ರತಿ ಬಸ್ ಗಾಗಿ ಪರದಾಡ್ತಿದ್ದಾರೆ.. ಬಂಡಿಗಣಿ ಕ್ರಾಸ್ ಬಸ್ ನಿಲ್ಲಿಸದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ..
ಪಾಸ್ ಇದ್ರೂ ಜಮಖಂಡಿ ಹಾಗೂ ಬನಹಟ್ಟಿಗೆ ತೆರಳಲು ಬಸ್ ಸೌಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬೇಸತ್ತುಹೋಗಿದ್ದಾರೆ..