ಮಲಯಾಳಂ ಚಿತ್ರರಂಗದ ಹಿರಿಯ ಕಲಾವಿದ ಕೆ ಟಿ ಎಸ್ ಪಡನ್ನಯಿಲ್ ನಿಧನ

1 min read

ಮಲಯಾಳಂ ಚಿತ್ರರಂಗದ ಹಿರಿಯ ಕಲಾವಿದ ಕೆ ಟಿ ಎಸ್ ಪಡನ್ನಯಿಲ್ ನಿಧನ

88 ವರ್ಷದ ಕೆ ಟಿ ಎಸ್ ಪಡನ್ನಯಿಲ್ ನಿಧನ ಪಡನ್ನಯಿಲ್

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ

ಪಡನ್ನಯಿಲ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಸಂತಾಪ

90ರ ದಶಕದಲ್ಲಿ ಮಲಯಾಳಂ ಚಿತ್ರರಂಗ ಪ್ರವೇಶ

ಮಲಯಾಳಂ ಚಿತ್ರರಂಗದ ಹಿರಿಯ ಕಲಾವಿದ ಕೆ.ಟಿ.ಎಸ್ ಪಡನ್ನಯಿಲ್  ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. 88 ವರ್ಷದ ಕೆ ಟಿ ಎಸ್ ಪಡನ್ನಯಿಲ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜುಲೈ 19 ರಂದು ಕೊಚ್ಚಿಯ ಕಡವಂತರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ  ಇದೀಗ  ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಹಿರಿಯ ಕಲಾವಿದ ಕೆ.ಟಿ.ಎಸ್ ಪಡನ್ನಯಿಲ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ನಟ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದರಾಗಿದ್ದ ಕೆ.ಟಿ.ಎಸ್ ಪಡನ್ನಯಿಲ್ ಅವರು  90ರ ದಶಕದಲ್ಲಿ ಮಲಯಾಳಂ ಚಿತ್ರರಂಗ ಪ್ರವೇಶಿಸಿದರು. 1995 ರಲ್ಲಿ ರಾಜಸೇನನ್ ನಿರ್ದೇಶನದಲ್ಲಿ ಬಿಡುಗಡೆಯಾದ ‘ಅನಿಯನ್ ಬಾವಾ ಚೆಟ್ಟನ್ ಬಾವಾ’ ಸಿನಿಮಾದಲ್ಲಿ ಮೊದಲ ನಟಿಸಿದರು. ಸುಮಾರು ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಕೆ.ಟಿ.ಎಸ್ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ರಾಜಮೌಳಿಯ ‘RRR’ ತಂಡ ಸೇರಿದ ‘ಬಾಹುಬಲಿ’..!  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd