Kuldeep Yadav : ವಿಕೆಟ್ಗಳ ಗೊಂಚಲು ಪಡೆದ ಕುಲ್ದೀಪ್ ಯಾದವ್ ಅದ್ಭುತ ಆಟ..!!
ಟೀಮ್ ಇಂಡಿಯಾದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತೊಮ್ಮೆ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದಾರೆ.
ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಂಡಿರುವ ಕುಲ್ದೀಪ್ ವಿಕೆಟ್ಗಳ ಗೊಂಚಲು ಪಡೆದು ಖಾಯಂ ಆಟಗಾರ ಅನ್ನೋದನ್ನು ನಿರೂಪಿಸುತ್ತಿದ್ದಾರೆ.
ಲಂಕಾ ವಿರುದ್ಧ ಸ್ಪಿನ್ ಮ್ಯಾಜಿಕ್ ಮಾಡಿದ ಕುಲ್ದೀಪ್ 10 ಓವರ್ಗಳಿಂದ 51 ರನ್ ನೀಡಿ 3 ವಿಕೆಟ್ ಪಡೆದರು. ಈ ಪ್ರದರ್ಶನ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಕುಲ್ದೀಪ್ ಹಲವಾರು ಮೈಲುಗಲ್ಲನ್ನು ಮುಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕುಲ್ದೀಪ್ 200 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ 23ನೇ ಬೌಲರ್ ಹಾಗೂ ತಂಡದ 10ನೇ ಸ್ಪಿನ್ನರ್ ಆಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾಜಿ ಸ್ಪಿನ್ನರ್ಗಳಾದ ಅನಿಲ್ ಕುಂಬ್ಳೆ 953 ವಿಕೆಟ್, ಹರ್ಭಜನ್ ಸಿಂಗ್ 707, ಆರ್.ಅಶ್ವಿನ್ 672, ರವೀಂದ್ರ ಜಡೇಜಾ 482, ರವಿ ಶಾಸ್ತ್ರಿ 280, ಬಿಷನ್ ಬೇಡಿ 273, ಚಂದ್ರಶೇಖರ್ 245, ಯಜ್ವಿಂದರ್ ಚಾಹಲ್ 209, ಸಚಿನ್ ತೆಂಡೂಲ್ಕರ್ 201 ವಿಕೆಟ್ ಪಡೆದಿದ್ದಾರೆ.