ಕುಮಾರಸ್ವಾಮಿ ಒಳಸಂಚು ಶಾಲೆಯ ಪ್ರಿನ್ಸಿಪಾಲ್ : ಕೆ.ಎನ್. ರಾಜಣ್ಣ
ತುಮಕೂರು : ಹೆಚ್.ಡಿ. ಕುಮಾರಸ್ವಾಮಿಯವರು ಒಳಸಂಚು ಶಾಲೆಯ ಪ್ರಿನ್ಸಿಪಾಲ್, ನಾವೆಲ್ಲ ಸ್ಟೂಡೆಂಟ್ಸ್ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್. ರಾಜಣ್ಣ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಒಳಸಂಚು ರಾಜಕೀಯ ವಿಚಾರ ಭಾರಿ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಹಾಗೂ ಹೆಚ್ ಡಿ ಕುಮಾರಸ್ವಾಮಿ ಮಧ್ಯೆ ವಾಗ್ಯುದ್ಧವೇ ನಡೆಯುತ್ತಿದೆ.
ಈ ಬಗ್ಗೆ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ಒಳಸಂಜು ಶಾಲೆಯ ಪ್ರಿನ್ಸಿಪಾಲೇ ಹೆಚ್.ಡಿ ಕುಮಾರಸ್ವಾಮಿ ಅವರು. 20-20 ಸರಕಾರದಲ್ಲಿ 20 ತಿಂಗಳು ಅಧಿಕಾರ ಅನುಭವಿಸಿ, ಯಡಿಯೂರಪ್ಪಗೆ ಅಧಿಕಾರ ಬಿಟ್ಟು ಕೊಡಲಿಲ್ಲ.
ವಚನ ಭ್ರಷ್ಟತೆ ಪ್ರಾರಂಭದ ಇತಿಹಾಸ ಇದು. ಸಮಾಜಕ್ಕೆ ವಚನ ಭ್ರಷ್ಟತೆ ಮತ್ತು ಒಳ ಸಂಚನ್ನು ಕಲಿಸಿದ್ದೇ ಕುಮಾರಸ್ವಾಮಿಯವರು ಎಂದು ಟೀಕಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಸರಣಿ ಟ್ವೀಟ್ ಗಳ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿ ಹೇಳಿಕೆ ಸರಿಯಲ್ಲ.
ಜೆಡಿಎಸ್ ಗೆ ಗುಬ್ಬಿ ಶಾಸಕ ಶ್ರೀನಿವಾಸ್ ಗುಡ್ ಬೈ..?
ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಬರುವವರು ಇದ್ದಾರೆ, ಕಾಂಗ್ರೆಸಿಂದ ಹೋಗುವವರೂ ಇದ್ದಾರೆ.
2013 ರಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಸೋತಿದ್ದರು. ಆಗ ಜನ ಬದಲಾವಣೆ ಬಯಸಿ ಮತ್ತೊಬ್ಬರಿಗೆ ಅವಕಾಶ ಕೊಟ್ಟಿದ್ದರು. ಈ ಬಾರಿ ಪರಮೇಶ್ವರ್ ಗೆದ್ದಿದ್ದಾರೆ, ಕುಮಾರಸ್ವಾಮಿ ಬಂದು ಗೆಲ್ಲಿಸಿದ್ದಾರಾ ಎಂದು ಪ್ರಶ್ನಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel