ನನ್ನ ಮೇಲೆ ಲೈಂಗಿಕ ದೌರ್ಜನ್ಯವಾದಾಗ ನನಗೆ ಎಂಟು ವರ್ಷ – ನಟಿ ಖುಷ್ಬು….
ಇತ್ತೀಚೆಗಷ್ಟೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ಉಸ್ತುವಾರಿ ವಹಿಸಿಕೊಂಡಿರುವ ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಆಘಾತಕಾರಿ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾರೆ. ತನ್ನ ತಂದೆಯಿಂದಲೇ ಲೈಂಗಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾದಗ ನಾನು ಎಂಟು ವರ್ಷದವಳಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ.
ಪತ್ರಕರ್ತೆ ಬರ್ಖಾದತ್ ಅವರೊಂದಿಗಿನ ಸಂವಾದದಲ್ಲಿ ಮೊಜೊ ಕಥೆಗಾಗಿ ಮಾತನಾಡಿದ ಖುಷ್ಭು ಮಗು ಗಂಡಾಗಲಿ ಹೆಣ್ಣಾಗಲಿ ಮಗುವನ್ನ ದುರುಪಯೋಗಪಡಿಸಿಕೊಂಡಾಗ ಭಯವಾಗುತ್ತದೆ ಎಂದು ಎಂದು ಹೇಳಿದ್ದಾರೆ.
ನನ್ನ ತಾಯಿ ಅತ್ಯಂತ ಕೆಟ್ಟ ವಿವಾಹದ ಮೂಲಕ ಸಾಗಿ ಬಂದಿದ್ದಾರೆ. ಹೆಂಡತಿ ಮಕ್ಕಳನ್ನ ಹೊಡೆದು ತನ್ನ ಏಕೈಕ ಮಗಳನ್ನ ಲೈಂಗಿಕವಾಗಿ ನಿಂದಿಸಿವುದನ್ನ ಆತ ತನ್ನ ಜನ್ಮ ಸಿದ್ಧ ಹಕ್ಕು ಎಂದು ಭಾವಿಸಿಕೊಂಡಿದ್ದ. ನನ್ನ ಮೇಲೆ ನಿಂದೆ ಪ್ರಾರಂಭವಾದಗಾ ನನಗೆ ಕೇವಲ 8 ವರ್ಷ ನನಗೆ 15 ವರ್ಷವಾದಾಗ ಅವನ ವಿರುದ್ಧ ಮಾತನಾಡುವ ದೈರ್ಯವಿತ್ತು ಎಂದು ಹೇಳಿದ್ದಾರೆ. 16ನೇ ವರ್ಷದಲ್ಲಿ ನನ್ನ ತಂದೆ ನನ್ನ ತೊರೆದು ಹೋದ ಮುಂದಿನ ಊಟದ ಬಗ್ಗೆಯೂ ನಾವು ಯೋಚಿಸುವಂತಾಗಿತ್ತು ಎಂದು ಖುಷ್ಬು ಸುಂದರ್ ಸಂದರ್ಶದಲ್ಲಿ ಹೇಳಿಕೊಂಡಿದ್ದಾರೆ.
ನಟಿ ಖುಷ್ಭು 2010 ರಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.
Kushboo Sundar says her father sexually abused her when she was 8