lakshmi bomb
ಬಾಲಿವುಡ್ ನಲ್ಲಿ ಸದ್ಯ ಟಾಕ್ ಆಫ್ ದ ಟೌನ್ ಆಗಿರುವ ಸಿನಿಮಾ ಅಂದ್ರೆ ಅದು ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮಿ ಬಾಂಬ್ … ಈ ಚಿತ್ರದ ಟ್ರೇಲರ್ ಬಿಡುಗಡೆ ಆದಾಗಿನಿಂದಲೂ ಬರಿ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದೆ. ಲಕ್ಷ್ಮಿ ಬಾಂಬ್ ಸಿನಿಮಾ ಸದ್ಯ ನವೆಂಬರ್ 9 ರಂದು ರಿಲೀಸ್ ಆಗಲಿದೆ. ಆದರೆ ಸಿನಿಮಾದ ನಿಷೇಧಕ್ಕೆ ಕೆಲವು ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಅಲ್ಲದೇ ಸಿನಿಮಾದ ಟೈಟಲ್ ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಹಿರಿಯ ನಟ ಮುಖೇಶ್ ಖನ್ನಾ ಸಹ ಸಿನಿಮಾದ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿನಿಮಾದ ಹೆಸರಿನ ಬಗ್ಗೆ ಕರ್ಣಿ ಸೇನಾ ಸೇರಿದಂತೆ ಕೆಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಇನ್ನೂ ಸಿನಿಮಾದ ಹೆಸರು, ಹಿಂದು ದೇವತೆ ಲಕ್ಷ್ಮಿ ದೇವಿಗೆ ಅಪಮಾನ ಮಾಡುವ ಮಾದರಿಯಲ್ಲಿದೆ ಎಂದು ಅನೇಕರು ಆರೋಪಿಸಿದ್ದಾರೆ. ಹೀಗಾಗಿ ಸಿನಿಮಾದ ಹೆಸರು ಬದಲಾಯಿಸಬೇಕು, ಇಲ್ಲವಾದರೆ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಕರಣಿ ಸೇನಾ ಒತ್ತಾಯಿಸಿ, ಚಿತ್ರತಂಡಕ್ಕೆ ಕೋರ್ಟ್ ನೊಟೀಸ್ ಕಳಿಸಿತ್ತು. ಅದರಂತೆ ವಿವಾದಗಳ ಸುಳಿಯಲ್ಲಿ ಸಿಲುಕಿರುವ ಚಿತ್ರತಂಡ ಇದೀಗ ಸಿನಿಮಾ ‘ಸಿನಿಮಾದ ಹೆಸರನ್ನು ಬದಲಾಯಿಸಲಾಗಿದೆ’ ಎಂದು ಅಧಿಕೃತ್ವಾಗಿ ಹೇಳಿಕೆ ನೀಡಿದೆ. ಈ ಮೂಲಕ ಲಕ್ಷ್ಮಿ ಬಾಂಬ್ ಎಂದಿದ್ದ ಸಿನಿಮಾ ಹೆಸರನ್ನು ‘ಲಕ್ಷ್ಮಿ’ ಎಂದು ಮಾತ್ರ ಬದಲಾಯಿಸಲಾಗಿದೆ.
ಹೌದು ಸಿನಿಮಾದ ನಿರ್ದೇಶಕ ರಾಘವ ಲಾರೆನ್ಸ್ ಇಂದು ಸಿಬಿಎಫ್‌ಸಿ ಜೊತೆಗೆ ಮಾತನಾಡಿ, ಸಿನಿಮಾದ ಹೆಸರನ್ನು ‘ಲಕ್ಷ್ಮಿ ಬಾಂಬ್’ ನಿಂದ ‘ಲಕ್ಷ್ಮಿ’ ಎಂದು ಬದಲಾಯಿಸಿದ್ದಾರೆ. ಪ್ರೇಕ್ಷಕರ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ಈ ಬದಲಾವಣೆ ಮಾಡಲಾಗಿದೆ. ಪ್ರೇಕ್ಷಕರ ಭಾವನೆಗಳನ್ನು ನೋಯಿಸುವ, ಅಪಮಾನ ಮಾಡುವ ಉದ್ದೇಶ ಸಿನಿಮಾ ತಂಡಕ್ಕೆ ಇರಲಿಲ್ಲ ಎಂದೂ ಸಹ ಚಿತ್ರತಂಡ ಹೇಳಿಕೊಂಡಿದೆ. ಇನ್ನೂ ಈ ಹಿಂದೆ ಕರಣಿ ಸೇನಾ ಪರವಾಗಿ ವಕೀಲ ರಾಘವೇಂದ್ರ ಮೆರಹೋತ್ರಾ ಎಂಬುವರು ಚಿತ್ರತಂಡಕ್ಕೆ ಲೀಗಲ್ ನೊಟೀಸ್ ಕಳಿಸಿದ್ದರು. ‘ಉದ್ದೇಶಪೂರ್ವಕವಾಗಿ, ಅವಮಾನಕರ, ಅವಹೇಳನಕಾರಿ, ಮನನೋಯಿಸುವ ಹೆಸರನ್ನು ಸಿನಿಮಾಕ್ಕೆ ಇಡಲಾಗಿದೆ. ದೇವತೆ ಲಕ್ಷ್ಮಿಗೆ ಅಪಮಾನ ಮಾಡುವ ಉದ್ದೇಶದಿಂದಲೇ ಈ ಹೆಸರು ಇಡಲಾಗಿದೆ’ ಎಂದು ನೊಟೀಸ್‌ನಲ್ಲಿ ಉಲ್ಲೇಖವಾಗಿತ್ತು. ಇದೀಗ ಎಲ್ಲಾ ಒತ್ತಡಗಳಿಗೆ ಮಣಿದು ಜನರ ಬಾವನೆಗಳನ್ನ ಗೌರವಿಸಿ ಸಿನಿಮಾದ ಟೈಟಲ್ ಚೇಂಜ್ ಮಾಡಲಾಗಿದೆ.

ಅಂದ್ಹಾಗೆ ಈ ಚಿತ್ರ ತಮಿಳಿನ ಕಾಂಚನ ಸಿನಿಮಾದ ರೀಮೇಕ್ ಆಗಿದೆ. ವಿಶೇಷ ಅಂದ್ರೆ ಕಾಂಚನಕ್ಕೆ ಆಕ್ಷನ್ ಕಟ್ ಹೇಳಿ ನಟಿಸಿ ಜನರ ಗಮನಸೆಳೆದ ರಾಘವ ಲಾರೆನ್ಸ್ ಅವರೇ ಹಿಂದಿಯಲ್ಲಿ “ಲಕ್ಷ್ಮಿ” ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರಿಗೆ ನಾಯಕಿಯಾಗಿ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ.
lakshmi bomb
ದೇವರಗುಂಡಿ ಫಾಲ್ಸ್ ನಲ್ಲಿ ಹಾಟ್…ಹಸಿಬಿಸಿ ಫೋಟೋಶೂಟ್; ದೈವಿಕ ಕ್ಷೇತ್ರದ ಅಪವಿತ್ರವೆಂದು ಆಕ್ರೋಶ
‘ಕನ್ನಡ ಸಿನಿಮಾ ಮತ್ತು ಕನ್ನಡ ಸಂಸ್ಕೃತಿ ನನ್ನ ಉಸಿರು’ ಅಂದ್ರು ಕಿಚ್ಚ ಸುದೀಪ್..!
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ನಟ ಚಂದು ಗೌಡ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







