ಲತಾ ಮಂಗೇಶ್ಕರ್ ಅಂತ್ಯ ಸಂಸ್ಕಾರ – ಶಿವಾಜಿ ಪಾರ್ಕ್ ಗೆ ಆಗಮಿಸಿದ ಗಣ್ಯರು….
ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ನಟ ಶಾರುಖ್ ಖಾನ್ ಸೇರಿದಂತೆ ಹಲವಾರು ಗಣ್ಯರು ಮತ್ತು ರಾಜಕೀಯ ನಾಯಕರು ಮುಂಬೈನ ಶಿವಾಜಿ ಪಾರ್ಕ್‌ಗೆ ಗಾಯಕಿ ಲತಾ ಮಂಗೇಶ್ಕರ್ ಅವರ ಅಂತಿಮ ಸಂಸ್ಕಾರಕ್ಕೆ ಆಗಮಿಸಿದ್ದಾರೆ.
ಹೆಚ್ಚಿನ ಬಿಗಿ ಭದ್ರತೆಯಲ್ಲಿ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಎರಡು ದಿನಗಳ ಶೋಕಾಚರಣೆ ಘೋಷಿಸಿದ್ದು, ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರ ಸೋಮವಾರ ರಾಜ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸಿದೆ.
ಇದಕ್ಕೂ ಮೊದಲು, ಸಾವಿರಾರು ಜನರು ಮಂಗೇಶ್ಕರ್ ಅವರ ನಿವಾಸ ಪ್ರಭು ಕುಂಜ್‌ನ ಹೊರಗೆ ಜಮಾಯಿಸಿದರು. ಅಂತ್ಯಕ್ರಿಯೆಯ ಮೆರವಣಿಗೆ ಹೊರಟ ನಂತರ ನಮಸ್ಕಾರಕ್ಕೆ ಅವಕಾಶ ನಿಡಲಾಯಿತು. ಅಲ್ಲದೇ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಸಾರ್ವಜನಿಕರ ದರ್ಶನಕ್ಕೆ ಕೆಲ ಹೊತ್ತು ಅವಕಾಶ ನೀಡಲಾಯಿತು..