ಚಿರತೆಯನ್ನೇ ಕೊಂದು ತಿಂದ ನರರಾಕ್ಷಸರು…! ಥೂ.. ಇವರು ಮೃಗಗಳಿಗಿಂತ ಕಡೆ!
1 min read
ಚಿರತೆಯನ್ನೇ ಕೊಂದು ತಿಂದ ನರರಾಕ್ಷಸರು…! ಥೂ.. ಇವರು ಮೃಗಗಳಿಗಿಂತ ಕಡೆ!
ಕಾಡು ಪ್ರಾಣಿಗಲಾಗಲಿ, ಮೂಕ ಪ್ರಾಣಿಗಳಿಗಾಗಲಿ, ಪರಿಸರಕ್ಕೆ, ಮರ ಗಿಡಗಳಿಗೆ , ಒಟ್ಟಾರೆ ಪೃಕೃತಿಗೆಡ ಈ ಹಾಳು ಮನುಷ್ಯರಿಂದ ಉಳಿಗಾಲವಿಲ್ಲದಂತಾಗಿದೆ. ಮನುಷ್ಯನ ಸ್ವಾರ್ಥಕ್ಕೆ ಎಲ್ಲವೂ ಬಲಿಯಾಗ್ತಿವೆ. ಇದೇ ರೀತಿ ಅದೆಷ್ಟೋ ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಅಪಾಯ ತಟ್ಟಿದೆ.
ಆದ್ರೆ ಕೇರಳದಲ್ಲಿ ಕೆಲ ನೀಚರು ಮಾಡಿರೋ ಹೀನ ಕೃತ್ಯಕ್ಕೆ ಎಂಥವರಿಗೂ ಕೋಪ ಬರದೇ ಇರಲ್ಲ. ಇವರು ಮನುಷ್ರಾದ್ರೂ ಮೃಗಗಳಿಗಿಂತ ಕಡೆ… ಚಿರತೆಯೊಂದನ್ನ ಬೇಟೆಯಾಡಿ ಅದನ್ನ ಕೊಂದು ಅದನ್ನ ತಿಂದಿರುವ ಐವರು ಭಕ್ಷಕರನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕೇರಳದ ಮನ್ಕುಲಂ ನ ಇದುಕ್ಕಿ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿನೋದ್, ಕುರಿಯಾಕೋಸೆ, ಬಿನು, ಕುಂಜಪ್ಪನ್, ವಿನ್ಸೆಂಟ್ ಬಂಧಿತ ಆರೋಪಿಗಲಾಗಿದ್ದಾರೆ.
ವಾಟ್ಸಾಪ್ ಕಲರ್ ಅಲ್ಲ.. ನಿಮ್ಮ ಕಲರ್ ಚೇಂಜ್ ಆಗ್ಬಿಡುತ್ತೆ ಹುಷಾರ್..!
ಮುನಿಪಾರಾ ಅರಣ್ಯ ಪ್ರದೇಶ ವ್ಯಾಪ್ತಿಯಿಂದ ಸುಮಾರು 100 ಕಿಮಿ ದೂರದಲ್ಲಿ ಖಾಸಗಿ ಜಮೀನೊಂದರಲ್ಲಿ ಕುರಿಯಾಕೋಸೆ ಹಾಗೂ ವಿನೋದ್ ಸೇರಿ ಚಿರತೆ ಸೆರೆಗೆ ಬಲೆ ಬೀಸಿದ್ದರು. ಈ ಬಲೆಗೆ ಸುಮಾರು 6 ವರ್ಷದ ಚಿರತೆ ಸೆರೆಯಾಗಿತ್ತು. ಬಳಿಕ ಈ ಚಿರತೆಯನ್ನ ವಿನೋದ್ ಮನೆಗೆ ಸಾಗಿಸಲಾಗಿದೆ. ಅಲ್ಲಿ ಈ ಮೃಗಗಳು ಚಿರತೆಯನ್ನ ಕೊಂದು ಅದನ್ನ ಬೇಯಿಸಿ ತಿಂದಿದ್ದಾರೆ.
ಆದ್ರೆ ಚಿರತೆಯ ಹಲ್ಲು ಹಾಗೂ ಅದರ ಚರ್ಮವನ್ನ ಮಾತ್ರ ಪ್ರತ್ಯೇಕಿಸಿ ಎತ್ತಿಟ್ಟಿದ್ದರು. ಬಳಿಕ ಈ ಬಗ್ಗೆ ಹೇಗೋ ಮಾಹಿತಿ ಕಲೆ ಹಾಕಿರುವ ಅರಣ್ಯಾಧಿಕಾರಿಗಳು ಮನೆಗೆ ನುಗ್ಗಿ ಐವರನ್ನ ಬಂಧಿಸಿ 10 ಕೆಜಿ ಚಿರತೆ ಮಾಂಸವನ್ನ ಜೊತೆಗೆ ಅದರ ಚರ್ಮ ಹಾಗೂ ಮೂಳೆಯನ್ನ ವಶಕ್ಕೆ ಪಡೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel