pharma firms : ನಕಲಿ ಗುಣಮಟ್ಟದ ಔಷಧ ತಯಾರಿಕೆ ; 18 ಫಾರ್ಮ ಸಂಸ್ಥೆಗಳ ಪರವಾನಿಗೆ ರದ್ದು…..
ನಕಲಿ ಗುಣಮಟ್ಟದ ಔಷಧಗಳ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಶಿಸ್ತು ಕ್ರಮದ ಭಾಗವಾಗಿ 18 ಕಂಪನಿಗಳ ಪರವಾನಿಗೆಯನ್ನ ರದ್ದುಗೊಳಿಸಿ, ಉತ್ಪಾದನೆಯನ್ನ ಸ್ಥಗಿತಗೊಳಿಸಿ ಆದೇಶಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ ಮೂರು ಕಂಪನಿಗಳಿಗೆ ನಿರ್ದಿಷ್ಟ ಉತ್ಪನ್ನಗಳನ್ನ ತಯಾರಿಸುವ ಅನುಮತಿಯನ್ನ ರದ್ದುಗೊಳಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಔಷಧ ನಿಯಂತ್ರಣ ಕಚೇರಿಗಳ ಜಂಟಿ ತಂಡಗಳ ತಪಾಸಣೆ ಬಳಿಕ 26 ಕಂಪನಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 76 ಕಂಪನಿಗಳಲ್ಲಿ ಮೊದಲ ಹಂತದ ತಪಾಸಣೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಂಗ್ರಹಿಸಿದ ಮಾದರಿಗಳ ವರದಿಗಳ ಆಧಾರದ ಮೇಲೆ ಸರ್ಕಾರವು 203 ಕಂಪನಿಗಳನ್ನ ಗುರುತಿಸಿದೆ ಎಂದು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ತಪಾಸಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುವ ಮೂಲಕ ಭಾರತವು ಜಾಗತಿಕ ಫಾರ್ಮಾ ಮೇಜರ್ ಆಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಈ ಕ್ರಮ ಜರುಗಿದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲಿ, ಸರ್ಕಾರವು ತನ್ನ ಜೆನೆರಿಕ್ ಔಷಧ ಮಳಿಗೆ – ಜನ ಔಷಧಿ ಕೇಂದ್ರಗಳನ್ನು ಪ್ರದರ್ಶಿಸಿತು.
Licences of 18 pharma firms cancelled in crackdown