ಜುಲೈ 20ರಿಂದ ಮದ್ಯದ ದರ ದುಬಾರಿಯಾಗಲಿದೆ. 2023-24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20ರಿಂದ ಜಾರಿಯಾಗಲಿದೆ ಎನ್ನಲಾಗಿದೆ.
ಹೀಗಾಗಿ ಜುಲೈ 20ರಿಂದ ಮದ್ಯದ ಬೆಲೆ ಹೆಚ್ಚಳವಾಗಲಿದೆ. ಅಬಕಾರಿ ಮೇಲಿನ ಹೆಚ್ಚುವರಿ ಸುಂಕ ಹೆಚ್ಚಳ ಕುರಿತಾಗಿ ಸರ್ಕಾರದಿಂದ ಸೋಮವಾರ ಕರಡು ಪ್ರಕಟಿಸಲಾಗಿದ್ದು, 7 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಕೋರಲಾಗಿದೆ. ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿದಂತೆ ಎಲ್ಲ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲ ಘೋಷಿತ 18 ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಇರುವ ದರಕ್ಕಿಂತ ಶೇ. 20ರಷ್ಟು ಹೆಚ್ಚಳವಾಗಲಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರ ಸುಂಕ ಶೇ. 10ರಷ್ಟು ಹೆಚ್ಚಳ ಮಾಡಲಿದ್ದು, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ. 175ರಿಂದ ಶೇ. 185ರಷ್ಟು ಹೆಚ್ಚಳವಾಗಲಿದೆ.
ಭಾರತೀಯ ಮದ್ಯ 60 ಎಂಎಲ್ ಒಂದು ಪೆಗ್ ಗೆ 10 ರಿಂದ 20 ರೂ. ಹೆಚ್ಚಳ ಆಗಲಿದೆ. ಬಿಯರ್ ಬೆಲೆ ಪ್ರತಿ ಬಾಟಲ್ ಗೆ ಮೂರರಿಂದ ಐದು ರೂ. ಹೆಚ್ಚಳವಾಗಲಿದೆ ಎನ್ನಲಾಗಿದೆ.