SRH : ಸನ್ ರೈಸರ್ಸ್ ಹೈದರಾಬಾದ್ ಸ್ಥಿತಿಗೆ ಆತನೇ ಕಾರಣ
ಸತತ ಸೋಲುಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ಸ್ ಹಾದಿಯಿಂದ ದೂರ ಸರಿದಿದೆ.
ಈ ಆವೃತ್ತಿಯ ಆರಂಭದಲ್ಲಿ ಸತತ ಎರಡು ಪಂದ್ಯಗಳನ್ನ ಸೋತ ಸನ್ ರೈಸರ್ಸ್ ಹೈದರಾಬಾದ್ ತಂಡ ನಂತರ ಬ್ಯಾಕ್ ಟು ಬ್ಯಾಕ್ ಗೆಲುವುಗಳೊಂದಿಗೆ ಅಬ್ಬರಿಸಿತ್ತು.
ಆದ್ರೆ ನಂತರ ಮತ್ತೆ ಸೋಲಿನ ಸುಳಿಗೆ ಸಿಲುಕಿದೆ. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅಭಿಮಾನಿಗಳು ಟೀಕೆಗಳ ಸುರಿಮಳೆಗೈಯ್ಯುತ್ತಿದ್ದಾರೆ.
ಮುಖ್ಯವಾಗಿ ಕಳೆದ ಎರಡು ಪಂದ್ಯಗಳಲ್ಲಿ ಆರ್ ಸಿಬಿ ವಿರುದ್ಧ 67 ರನ್, ಕೆಕೆಆರ್ ವಿರುದ್ಧ 54 ರನ್ ಗಳ ಅಂತರದ ಸೋಲು ಎಸ್ ಆರ್ ಹೆಚ್ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಹೀಗಾಗಿ ಕೊನೆಯ ಎರಡು ಪಂದ್ಯಗಳಲ್ಲಿ ಭಾರಿ ಗೆಲುವುಗಳನ್ನು ಸಾಧಿಸಬೇಕಾದ ಒತ್ತಡಕ್ಕೆ ಸಿಲುಕಿದೆ.
ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ನ ಮಾಜಿ ಆಟಗಾರ್ತಿ ಲಿಸಾ ಸ್ತಾಲೆಕರ್, ಈ ಸೀಸನ್ ನಲ್ಲಿ ವಿಲಿಯಮ್ ಸನ್ ಸೇನೆ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆಲ್ಲುವುದು ಕಷ್ಟ ಎಂದಿದ್ದಾರೆ. ಸನ್ ರೈಸರ್ಸ್ ಪ್ರಯಾಣ ಇಲ್ಲಿಗೆ ಮುಗಿದಿದೆ ಎಂದಿದ್ದಾರೆ.
ಕಳೆದ ಎರಡು ಮ್ಯಾಚ್ ಗಳಲ್ಲಿ ಹೈದರಾಬಾದ್ ತಂಡ 120+ ಸ್ಕೋರ್ ಮಾಡಿದ್ದಾರೆ. ಮೊದಲು ಬ್ಯಾಟ್ ಮಾಡಿದ್ರೂ ಚೇಸಿಂಗ್ ಮಾಡಿದ್ರೂ ಇದೇ ಪರಿಸ್ಥಿತಿ.
ಮುಖ್ಯವಾಗಿ ಟಾಪ್ ಆರ್ಡರ್ ನಲ್ಲಿ ಕೇನ್ ವಿಲಿಯಮ್ ಸನ್ ಚೆನ್ನಾಗಿ ಆಡಬೇಕಿತ್ತು. ಒಬ್ಬ ವರ್ಲ್ಡ್ ಕ್ಲಾಸ್ ಪ್ಲೇಯರ್ ನಿಂದ ಕನಿಷ್ಟ ಪ್ರದರ್ಶನ ನಿರೀಕ್ಷಿಸಬಹುದಾಗಿತ್ತು.
ಆದ್ರೆ ಆತ ತಮ್ಮ ಘನತೆಗೆ ತಕ್ಕಂತೆ ಬ್ಯಾಟ್ ಬೀಸಲಿಲ್ಲ. ಹೀಗಾಗಿ ನಾನು ಸನ್ ರೈಸರ್ಸ್ ತಂಡ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುತ್ತೆ ಅಂತಾ ಅಂದುಕೊಳ್ಳುತ್ತಿಲ್ಲ ಎಂದು ಲಿಸಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಗಾಯಗೊಂಡಿರುವ ವಾಷಿಂಗ್ ಟನ್ ಸುಂದರ್, ಟಿ ನಟರಾಜನ್ ಸೇವೆಗಳನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಕಳೆದುಕೊಂಡಿದ್ದು, ತಂಡದ ಮೇಲೆ ಪರಿಣಾಮ ಬೀರಿದೆ.
ಕೇನ್ ಆರಂಭಿಕರಾಗಿ ಅಲ್ಲದೇ ಒನ್ ಡೌನ್ ನಲ್ಲಿ ಬಂದರೇ ಚೆನ್ನಾಗಿತ್ತದೆ ಎಂದು ತಿಳಿಸಿದ್ದಾರೆ.
ಅಂದಹಾಗೆ ಈ ಸೀಸನ್ ನಲ್ಲಿ 12 ಪಂದ್ಯಗಳನ್ನಾಡಿರುವ ಕೇನ್ ವಿಲಿಯಮ್ ಸನ್ 208 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 57. lisa-sthalekar-says-hard-how-srh-could-win-last-2-games ipl 2022