ಇಂಗ್ಲೀಷ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದ ಲಿವರ್ ಪೂಲ್ ಫುಟ್ ಬಾಲ್ ಕ್ಲಬ್
ಲಿವರ್ ಪೂಲ್ ತಂಡ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದೆ. ಅದು ಸರಿ ಸುಮಾರು 30 ವರ್ಷಗಳ ಬಳಿಕ ಪ್ರತಿಷ್ಠಿತ ಇಂಗ್ಲೀಷ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆದ್ದುಕೊಂಡಿದೆ. 2019-20ನೇ ಸಾಲಿನ ಇಪಿಎಲ್ ಲೀಗ್ ಟೂರ್ನಿಯಲ್ಲಿ ಲಿವರ್ ಪೂಲ್ ತಂಡ ಅದ್ಭುತ ಪ್ರದರ್ಶನವನ್ನೇ ನೀಡಿದೆ. 30 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದ ಖುಷಿಯನ್ನು ಲಿವರ್ ಪೂಲ್ ತಂಡದ ಅಭಿಮಾನಿಗಳು ಹಂಚಿಕೊಂಡಿದ್ದಾರೆ.
ಕೋವಿಡ್ 1-9 ಶಿಷ್ಟಚಾರ -ನಿಯಗಳು ಇದ್ರೂ ಕೂಡ ಅದನ್ನು ಲೆಕ್ಕಿಸದೇ ಅಭಿಮಾನಿಗಳು ಬೀದಿ ಬೀದಿಯಲ್ಲಿ ಸಂಭ್ರಮಾಚರಣೆ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಲಿವರ್ ಪೂಲ್ ತಂಡದ ಆಟಗಾರರು ಸಂತಸವನ್ನು ಬಣ್ಣಿಸಲು ಸಾಧ್ಯವಿಲ್ಲ. ಆ ಮಟ್ಟದಲ್ಲಿ ಈ ಪ್ರಶಸ್ತಿ ಗೆದ್ದ ಖುಷಿಯನ್ನು ಸಂಭ್ರಮಿಸಿದೆ.
ಆದ್ರೆ ಲಿವರ್ ಪೂಲ್ ತಂಡದ ಐತಿಹಾಸಿಕ ಗೆಲುವಿಗೆ ಕೋವಿಡ್ 1-9 ಅಡ್ಡಿಯನ್ನುಂಟು ಮಾಡಿತ್ತು. ಇಲ್ಲದೇ ಇದ್ರೆ ಈ ಗೆಲುವಿನ ಸಂಭ್ರಮಕ್ಕೆ ಇತಿಮಿತಿ ಇರುತ್ತಿರಲಿಲ್ಲ. ಆದ್ರೂ ತಂಡದ ಅಭಿಮಾನಿಗಳು ಕೋವಿಡ್-19, ಪೋಲಿಸರನ್ನು ಲೆಕ್ಕಿಸದೇ ಸಂಭ್ರಮ, ಖುಷಿಯ ಸಡಗರದಲ್ಲಿ ತೇಲಾಡಿದ್ರು.
ಆನ್ಫೆಲ್ಡ್ ಮೈದಾನದಲ್ಲಿ ಪ್ರೇಕ್ಷಕರಿಲ್ಲದೇ ನಡೆದ ಪಂದ್ಯದಲ್ಲಿ
ಲಿವರ್ ಪೂಲ್ ತಂಡ 5-3ರಿಂದ ಚೆಲ್ಸಾ ತಂಡವನ್ನು ಮಣಿಸಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದು ಅರ್ಹವಾಗಿಯೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ,
ಲಿವರ್ ಪೂಲ್ ತಂಡದ ಪರ ನಬಿ ಕೇಟಾ ಮೊದಲ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ಒದಗಿಸಿದ್ರು. ಆ ನಂತರ ಟ್ರೆಂಟ್ ಅಲೆಕ್ಸಾಂಡರ್ ಅವರು ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು. ಒಟ್ಟಾರೆ, ಲಿವರ್ ಪೂಲ್ ತಂಡ ಆಡಿರುವ 19 ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಸೋತಿಲ್ಲ. 18 ಪಂದ್ಯಗಳಲ್ಲಿ ಜಯ ಸಾಧಿಸಿರುವ ಲಿವರ್ ಪೂಲ್ ತಂಡ ಒಂದೇ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಟ್ಟು 96 ಅಂಕಗಳನ್ನು ಪಡೆದುಕೊಂಡಿದೆ.








