ಒಂದು ವಾರ ಲಾಕ್.. 500 ಕೋಟಿ ಪ್ಯಾಕೇಜ್.. ಯಾರಿಗೆ ನೆರವು..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹುಚ್ಚು ಕುದುರೆ ಓಟಕ್ಕೆ ಕಡಿವಾಣ ಹಾಕಲು ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಿದ್ದಾರೆ. ಇದರೊಂದಿಗೆ ಜೂನ್ 14 ರ ವರೆಗೆ ಕರುನಾಡು ಸ್ತಬ್ಧವಾಗಲಿದೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಮೊದಲಿಗೆ ರಾಜ್ಯದಲ್ಲಿ ಜೂನ್ 14ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದರು. ಅಲ್ಲದೇ 500 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ ನೇಕಾರರು, ಮೀನುಗಾರರು ಹಾಗೂ ಚಿತ್ರರಂಗದವರಿಗೆ ಸೇರಿದಂತೆ ಹಲವು ಸಮುದಾಯದವರಿಗೆ 2ನೇ ಪ್ಯಾಕೇಜ್ ನಲ್ಲಿ ಅನುದಾನ ನೀಡಿದ್ದಾರೆ.
ಯಾರಿಗೆ ನೆರವು…?
ನೇಕಾರರು, ಪವರ್ ಲೂಮ್ ಗೆ 3 ಸಾವಿರ ರೂಪಾಯಿ ಪರಿಹಾರ
ಮೀನುಗಾರರಿಗೆ ತಲಾ 3 ಸಾವಿರ ರೂಪಾಯಿ ಪರಿಹಾರ ಘೋಷಣೆ
ಚಲನಚಿತ್ರ ರಂಗದ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೂ ಮೂರು ಸಾವಿರ
ದೋಣಿ ಮಾಲೀಕರಿಗೆ, ಮುಜರಾಯಿ ಇಲಾಖೆ ಸಿಬ್ಬಂದಿ, ಮಸೀದಿಯ ಕೇಶ್ ಇಮಾಮ್ ಗಳಿಗೆ, ಅಡುಗೆ ಸಿಬ್ಬಂದಿಗೆ 3 ಸಾವಿರ ರೂಪಾಯಿ, ಅನುದಾನ
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ, ಆಶಾ ಕಾರ್ಯಕರ್ತೆಯರಿಗೆ 2 ಸಾವಿರ ರೂಪಾಯಿ ಪರಿಹಾರ
ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ಪರಿಹಾರ ನಿಧಿ,
ಅನುದಾನ ರಹಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 5 ಸಾವಿರ ರೂಪಾಯಿ ಪರಿಹಾರ
ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಶುಲ್ಕ ಪಾವತಿಯಿಂದ ವಿನಾಯ್ತಿ