ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಲಾಕ್ ಡೌನ್ ಗೆ ಸ್ವಲ್ಪ ವಿನಾಯಿತಿ ಘೋಷಿಸಲಾಗಿದೆ. ಈ ಬಗ್ಗೆ ನಿನ್ನೆ ಘೋಷಣೆ ಮಾಡಿರುವ ಸರ್ಕಾರ ರಸ್ತೆ ನಿರ್ಮಾಣ, ನೀರಾವರಿ ಕಾಮಗಾರಿ, ಮೆಟ್ರೋ ರೈಲು ಕಾಮಗಾರಿ ಸೇರಿದಂತೆ ಕೆಲವು ವಲಯಗಳಿಗೆ ನಿಯಮಿತ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿದೆ. ಮಧ್ಯ ರಾತ್ರಿಯಿಂದಲೇ ಇದು ಜಾರಿಗೆ ಬಂದಿದೆ.
ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗಿದ್ದರೂ, ಇದು ಹಾಟ್ ಸ್ಪಾಟ್ ಗಳಿಗೆ ಅನ್ವಯಿಸುವುದಿಲ್ಲ ಅಂತ ಸರ್ಕಾರ ಸ್ಪಷ್ಟಪಡಿಸಿದೆ.
ಹಾಗಾದ್ರೆ ಯಾವ ವಲಯಗಳಲ್ಲಿ ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ ಅನ್ನೋದನ್ನು ನೋಡೋದಾದ್ರೆ..
ಏನಿರುತ್ತೆ
ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಕ್ಲಿನಿಕ್ ಗಳಲ್ಲಿ ಎಂದಿನಂತೆ ಸೇವೆ ಇರಲಿದೆ.
ಮೆಡಿಕಲ್ ಶಾಪ್ ಗಳು, ಲ್ಯಾಬೋರೇಟರಿಗಳೂ ಓಪನ್.
ವೆಟರ್ನರಿ ಆಸ್ಪತ್ರೆಗಳು, ಡಿಸ್ಪೆನ್ಸರೀಸ್, ಪೆಥಾಲಜಿ ಸೇವೆಗಳು ಲಭ್ಯ.
ರೈತರ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
ಕೃಷಿಗೆ ಸಂಬಂಧಿಸಿದ ಉಪಕರಣಗಳ ಮಾರಾಟಕ್ಕೆ ಅನುಮತಿ.
ಎಪಿಎಂಸಿ ಮಾರ್ಕೆಟ್ ಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ.
ಕಡಲ ನಗರಿಗಳಲ್ಲಿ ಮೀನುಗಾರಿಕೆಗೆ ಅನುಮತಿ.
ಬ್ಯಾಂಕ್ ಗಳು, ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಕಿರಾಣಿ ಅಂಗಡಿ, ಮಾಂಸದ ಅಂಗಡಿಗಳು ಓಪನ್ ಆದ್ರೆ ಸಾಮಾಜಿಕ ಅಂತರ ಕಡ್ಡಾಯ.
ಕೋರಿಯರ್, ಅಂಚೆ ಸೇವೆಗೆ ಅನುಮತಿ, ಅಮೆಜಾನ್, ಫ್ಲಿಪ್ ಕಾರ್ಟ್ ಗಳ ಆನ್ ಲೈನ್ ಖರೀದಿ ಸೇವೆ ಲಭ್ಯ.
ವಿಮಾನ ನಿಲ್ದಾಣ, ರೈಲ್ವೆ ಸ್ಟೇಷನ್, ಕಂಟೇನರ್ ಡಿಪೋಗಳಲ್ಲಿ ಸಂಸ್ಕರಣಾ ಘಟಕ ಸೇವೆ ಆರಂಭ.
ಲಾಕ್ ಡೌನ್ ನಿಂದ ಸಿಲುಕಿಕೊಂಡಿರುವ ಪ್ರವಾಸಿಗರಿಗೆ ವಸತಿ ಕಲ್ಪಿಸಿರುವ ಹೋಟೆಲ್, ಹೋಮ್ ಸ್ಟೇ, ಲಾಡ್ಜ್ ಗಳಿಗೆ ಅನುಮತಿ ನೀಡಲಾಗಿದೆ.
ರಸ್ತೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ.
ಸಣ್ಣ, ಅತೀ ಸಣ್ಣ ಕೈಗಾರಿಕೆ ಸೇರಿ ಎಲ್ಲಾ ರೀತಿಯ ಕೈಗಾರಿಕಾ ಉತ್ಪಾದನಾ ವಲಯಗಳಿಗೆ ಅನುಮತಿ.
ಅಗತ್ಯ ವಸ್ತುಗಳ ಉತ್ಪಾದನೆ, ಔಷಧಿ ಉತ್ಪಾದನಾ, ಪ್ಯಾರಾಮೆಡಿಕಲ್ ಉಪಕರಣಗಳ ಉತ್ಪಾದನಾ ಕೈಗಾರಿಕೆಗಳಿಗೆ ನಿರ್ಬಂಧವಿಲ್ಲ.
ಮೆಟ್ರೋ ರೈಲು ಯೋಜನೆ ಕಾಮಗಾರಿಗೆ ಅನುಮತಿ.
ಯಾವುದು ಇರಲ್ಲ..?
ಮದ್ಯ ಮಾರಾಟ ಮಾಡಲು ಅವಕಾಶವಿಲ್ಲ.
ಸಾರ್ವಜನಿಕ ವಲಯಗಳಲ್ಲಿ ಕಾಫಿ, ಟೀ ಮಾರುವಂತಿಲ್ಲ.
ರೈಲು, ಬಸ್ಸು, ಮೆಟ್ರೋ ಸೇವೆಗಳು ಬಂದ್.
ವೈದ್ಯಕೀಯ ತುರ್ತು ಹೊರತುಪಡಿಸಿ ಅಂತರಾಜ್ಯ ಹಾಗೂ ಅಂತರ್ ಜಿಲ್ಲೆ ಓಡಾಟಕ್ಕಿಲ್ಲ ಅನುಮತಿ.
ಆಟೋ, ಟ್ಯಾಕ್ಸಿ, ಕ್ಯಾಬ್ ಗಳು ರಸ್ತೆಗಿಳಿಯಂಗಿಲ್ಲ.
ಸಿನಿಮಾ ಹಾಲ್, ಬಾರ್, ಪಾರ್ಕ್, ಸ್ವಿಮ್ಮಿಂಗ್ ಪೂಲ್, ಸಲೂನ್, ಶಾಪಿಂಗ್ ಮಾಲ್ ಗಳು ಎಂದಿನಂತೆ ಓಪನ್ ಇರಲ್ಲ.
ಸಾರ್ವಜನಿಕ ಸಭೆ ಸಮಾರಂಭಗಳಿಗಿಲ್ಲ ಅವಕಾಶ.
ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು 20 ಜನರಿಗಷ್ಟೇ ಅವಕಾಶ.
ಕೊರೊನಾ ಹಾಟ್ ಸ್ಪಾಟ್ ಏರಿಯಾಗಳಲ್ಲಿ ಕೇಂದ್ರದ ಗೈಡ್ ಲೈನ್ಸ್ ಎಂದಿನಂತೆ ಇರಲಿದೆ.
ಹಾಟ್ ಸ್ಪಾಟ್ ಝೋನ್ ಗಳಿಗೆ ಪರೀಕ್ಷೆ ಇಲ್ಲದೇ ಪ್ರವೇಶ ಇಲ್ಲ..








