ಪಂಪ್ ಹೌಸ್ನಲ್ಲಿ ಲಾಕ್ ಆದ ಚಿರತೆ

1 min read
Cheeta in Bone Saaksha Tv

ಪಂಪ್ ಹೌಸ್ನಲ್ಲಿ ಲಾಕ್ ಆದ ಚಿರತೆ Saaksha Tv

ಚಾಮರಾಜನಗರ: ಬೇಟೆ ಅರಸಿ ಬಂದ ಚಿರತೆಯೊಂದು ಜಮೀನಿನ ಪಂಪ್ ಹೌಸಿನಲ್ಲಿ ಬಂಧಿಯಾದ ಘಟನೆ ನಡೆದಿದೆ.

ಚಾಮರಾಜನಗರ ತಾಲೂಕಿನ ಉಡಿಗಾಲ ಸಮೀಪದ ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತರೊಬ್ಬರ ಪಂಪ್ ಹೌಸಿನಲ್ಲಿ ಅಂದಾಜು 3-4 ವರ್ಷದ ಗಂಡು ಚಿರತೆಯೊಂದು ಬೇಟೆ ಅರಸುತ್ತಾ ಪಂಪ್ ಹೌಸಿನಲ್ಲಿ ಲಾಕ್ ಆಗಿದೆ. ಕೂಡಲೇ, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.‌ ಸ್ಥಳಕ್ಕೆ ದೌಡಾಯಿಸಿದ ಪಶು ವೈದ್ಯಾಧಿಕಾರಿಗಳು ಚಿರತೆಗೆ ಅರವಳಿಕೆ ನೀಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

Cheeta in Bone Saaksha Tv

ಸದ್ಯ, ಚಿರತೆ ಆರೋಗ್ಯವಾಗಿದ್ದು ಮೈಮೇಲೆ ಯಾವುದೇ ಗಾಯಗಳು ಇರಲಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ. ಕಳೆದ 5 ತಿಂಗಳಿನಲ್ಲಿ ಸೆರೆಯಾದ 5ನೇ ಚಿರತೆ ಇದಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd