ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದು, ಈ ಮಧ್ಯೆ ಝೀ ನ್ಯೂಸ್ ಹಾಗೂ ಮ್ಯಾಟ್ರಿಜ್ ಸಮೀಕ್ಷಾ ಸಂಸ್ಥೆಯ ಸರ್ವೇಯೊಂದು ಹೊರ ಬಿದ್ದಿದ್ದು, ಬಿಜೆಪಿ ಅಂಗಳದಲ್ಲಿ ಸಂತಸ ಮನೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕೆಂದರೆ ಬಿಜೆಪಿ ಕನಿಷ್ಠ 370 ಸ್ಥಾನಗಳಲ್ಲಿ ಗೆಲ್ಲಬೇಕು ಎಂದಿದ್ದರು. ಸದ್ಯದ ಈ ಸರ್ವೇಯಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟಕ್ಕೆ 377 ಸ್ಥಾನ ಸಿಗಬಹುದು ಎನ್ನಲಾಗಿದೆ. ಕಾಂಗ್ರೆಸ್ ಸಾರಥ್ಯದ ಇಂಡಿಯಾ ಮೈತ್ರಿ ಕೂಟ ಕೇವಲ 94 ಸ್ಥಾನಗಳಿಗೆ ಸೀಮಿತವಾಗಬಹುದು ಎಂದು ಈ ಸರ್ವೇ ಭವಿಷ್ಯ ನುಡಿದಿದೆ.
ಕರ್ನಾಟಕದಲ್ಲಿ 2019ರಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2024ರಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಕೂಟವು 23 ಸ್ಥಾನಗಳಲ್ಲಿ ಜಯಗಳಿಸಲಿದ್ದು, 5 ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ ಎಂದು ಸಮೀಕ್ಷೆ ಹೇಳಿದೆ. ದೇಶದಲ್ಲಿ ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. ಮುಂದಿನ ದಿನಗಳಲ್ಲಿ ಯಾವ ಪಕ್ಷ ಏನು ತಂತ್ರ ಹೂಡುತ್ತದೆ. ಮತ್ತೊಮ್ಮೆ ಮೋದಿ ತಂತ್ರವೇ ನಡೆಯುವುದಾ ಕಾಯ್ದು ನೋಡಬೇಕಿದೆ.