ಅಧಿವೇಶನ ಆರೋಗ್ಯಕರ ಮತ್ತು ಫಲಿತಾಂಶ ಆಧಾರಿತ ಚರ್ಚೆ ನಡೆಯಲಿದೆ: ಸ್ಪೀಕರ್ ಓಂಬಿರ್ಲಾ – Saaksha Tv
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧ ಇಂದಿನಿಂದ ಆರಂಭವಾಗಲಿದ್ದು, ಆರೋಗ್ಯಕರ ಮತ್ತು ಫಲಿತಾಂಶ ಆಧಾರಿತ ಚರ್ಚೆ ನಡೆಯಲಿದೆ ಎಂದು ಲೋಕಸಭೆಯ ಸ್ಪೀಕರ್ ಓಂಬಿರ್ಲಾ ಟ್ವೀಟ್ ಮಾಡಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದ ದ್ವಿತೀಯಾರ್ಧವು ಇಂದಿನಿಂದ ಪ್ರಾರಂಭವಾಗುತ್ತಿದೆ. ಆರೋಗ್ಯಕರ ಮತ್ತು ಫಲಿತಾಂಶ-ಆಧಾರಿತ ಚರ್ಚೆಯೊಂದಿಗೆ ಸದನದ ಸದಸ್ಯರು ಸಕ್ರಿಯ ಪಾಲುದಾರಿಕೆ ಮತ್ತು ಸಕಾರಾತ್ಮಕ ಬೆಂಬಲ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ತಮ್ಮ ಟ್ವಿಟ್ ರ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
https://twitter.com/ANI/status/1503230593999699968?ref_src=twsrc%5Etfw%7Ctwcamp%5Etweetembed%7Ctwterm%5E1503230593999699968%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Fbharat%2Fbudget-session-lok-sabha-speaker-hopes-for-healthy-result-oriented-discussion-in-house%2Fka20220314104442015
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರಿಂದ ರಾಜ್ಯಸಭೆ ಮತ್ತು ಲೋಕಸಭೆಯ ಬಜೆಟ್ ಅಧಿವೇಶನದ ಎರಡನೇ ಭಾಗ ಆರಂಭವಾಗಿದೆ. ಆದರೂ ಕೂಡಾ ಕೊರೊನಾ ನಿಯಮಗಳು ಮತ್ತು ನಿರ್ಬಂಧಗಳ ಪಾಲನೆ ಮೂಲಕ ಅಧಿವೇಶನ ನಡೆಸಲಾಗುತ್ತಿದೆ. ಬಜೆಟ್ ಅಧಿವೇಶನದ ಮೊದಲಾರ್ಧವು ಜ.31ರಂದು ಪ್ರಾರಂಭವಾಗಿ ಫೆಬ್ರವರಿ 11 ರಂದು ಮುಕ್ತಾಯವಾಗಿತ್ತು. ಈಗ ದ್ವಿತೀಯಾರ್ಧ ಅಧಿವೇಶನವು ಇಂದಿನಿಂದ ಅರಂಭವಾಗಿ ಏ.8 ರಂದು ಮುಕ್ತಾಯಗೊಳ್ಳಲಿದೆ.








