ತೆಳ್ಳಗಾಗಲು ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ಆಹಾರ
ಪ್ರತಿಯೊಬ್ಬ ಮನುಷ್ಯನಿಗು ತಾನು ಅಂದವಾಗಿ ಕಾಣಬೇಕು ಎಂಬ ಆಸೆ ಇರೋದ ಸಹಜ. ಹೀಗಾಗಿ ನಾವು-ನೀವು ನಾನಾ ಕಸರತ್ತುಗಳನ್ನು ಮಾಡುತ್ತೇವೆ. ಬೆಳ್ಳಗೆ ಚಂದಾಗಿ ಬೆಳ್ಳಕ್ಕಿ ಹಾಗೆ ಕಾಣಲು ಮುಖಕ್ಕೆ ಕ್ರೀಮ್ ಗಳನ್ನು ಬಳಸುತ್ತೇವೆ. ಹಾಗೇ ಕೆಲವರು ದಪ್ಪ ಇದ್ದವರು ತೆಳ್ಳಗಾಗಲು ವ್ಯಾಯಾಮ, ಜಿಮ್ ಇನ್ನೇನೊ ಕಸರತ್ತು ಮಾಡುತ್ತಾರೆ.
ಮಾಡಿ ಅದು ದೇಹಕ್ಕೆ ಒಳ್ಳೇಯದು ಅದರೊಂದಿಗೆ ನಾವು ತಿನ್ನೋ ಆಹಾರದಲ್ಲೂ ಕೂಡ ಇತಿ ಮಿತಿಯಿಂದ ಇದ್ದು, ನಮ್ಮ ದೇಹ ತೆಳ್ಳಗಾಗಲು ಪೂರಕವಾಗುವಂತಹ ಆಹಾರವನ್ನು ಸೇವಿಸಿದರೆ ಸುಭವಾಗಿ ತೆಳ್ಳಗಾಗಬಹುದು.
ನೀವು ವ್ಯಾಯಾಮ ಮಾಡುವುದರ ಮೂಲಕ ಆರೋಗ್ಯಕರವಾಗಿರಲು ಪ್ರಯತ್ನಿಸುವುದು ಮಾತ್ರವಲ್ಲದೆ ಕಡಿಮೆ ಕಾರ್ಬೋಹೈಡ್ರೇಟ್ಗಳು, ಕಡಿಮೆ ಕ್ಯಾಲೋರಿಗಳು ಮತ್ತು ನಿಮ್ಮ ತೂಕವನ್ನು ನಿರ್ವಹಿಸಲು ಸಹಾಯ ಮಾಡುವ ಆಹಾರಗಳು ಈ ಕೆಳಗಿನಂತಿವೆ.
ಬೈಂಗನ್ ಚಿಪ್ಸ್
ಬೇಕಾಗುವ ಪದಾರ್ಥಗಳು
1 ಬದನೆಕಾಯಿ
ಆಲಿವ್ ಎಣ್ಣೆ
ಉಪ್ಪು
1/2 ಟೀಸ್ಪೂನ್ ಮೆಣಸು
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
ಮಾಡುವುದು ಹೇಗೆ
ಬದನೆಕಾಯಿಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ. ನಂತರ ಒಂದು ಪಾತ್ರೆಯಲ್ಲಿ ಬದನೆಕಾಯಿಯ ಹೋಳುಗಳನ್ನು ಹರಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಹಾಗೇ ಮೆಣಸು ಮತ್ತು ಮಸಾಲೆ ಹಾಕಿ ಮತ್ತು ಚಿಪ್ಸ್ ಗರಿಗರಿಯಾಗುವವರೆಗೆ (ಗೋಲ್ಡನ್ ಬ್ರೌನ್) ಬೇಯಿಸಿ. ಈ ನಿಮ್ಮ ಬೈಂಗನ್ ಚಿಪ್ಸ್ ಸವಿಯಲು ಸಿದ್ದ
ರಾಕೆಟ್ ಸಲಾಡ್
ಬೇಕಾಗುವ ಸಾಮಾಗ್ರಿಗಳು
ಹಿಡಿ ದಾಳಿಂಬೆ
3 ಇಂಚಿನ ಪನೀರ್
ಕೆಂಪು ಮತ್ತು ಹಳದಿ ಹುರಿದ ಮೆಣಸು
1/2 ಸೇಬು,
ತೆಳುವಾಗಿ ಕತ್ತರಿಸಿದ ಲಾಲ್ ಮೂಲಿ (ಕೆಂಪು ಮೂಲಂಗಿ)
ಹುರಿದ ಎಳ್ಳು
2 ಟೇಬಲ್ಸ್ಪೂನ್
ನಿಂಬೆ ರಸ 1/2 ಚಮಚ
ಕಾಳುಮೆಣಸು 1 ಟೀ ಚಮಚ
ದೇಸಿ ರಾಕೆಟ್ ಸಲಾಡ್ ಮಾಡುವುದು ಹೇಗೆ
1.ಮರದ ಬಟ್ಟಲಿನಲ್ಲಿ, ರಾಕೆಟ್ ಎಲೆಗಳನ್ನು ತೆಗೆದುಕೊಂಡು, ದಾಳಿಂಬೆ, ಸೇಬು, ಪುಡಿಮಾಡಿದ ಪನೀರ್, ಹುರಿದ ಕೆಂಪು ಮತ್ತು ಹಳದಿ ಮೆಣಸು ಮತ್ತು ತೆಳುವಾಗಿ ಕತ್ತರಿಸಿದ ಕೆಂಪು ಮೂಲಂಗಿ ಸೇರಿಸಿ. ನಂತರ ಕೊಟ್ಟಿರುವ ಎಲ್ಲಾ ಪದಾರ್ಥಗಳೊಂದಿಗೆ ಡ್ರೆಸ್ಸಿಂಗ್ ಮಾಡಿ. ನೀವು ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಸಲಾಡ್ ಮೇಲೆ ಡ್ರೆಸ್ಸಿಂಗ್ ಅನ್ನು ಹಾಕಿ. ಕೊನೆಗೆ ಬಡಿಸುವ ಮೊದಲು ಒಂದು ಪಿಂಚ್ ಚಾಟ್ ಮಸಾಲಾವನ್ನು ಸಿಂಪಡಿಸಿ.