Lpg gas price – ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 50ರೂ ಹೆಚ್ಚಳ
ಈ ತಿಂಗಳ ಆರಂಭದಲ್ಲಿ ವಾಣಿಜ್ಯ ಸಿಲಿಂಡರ್ ಗಳ ಬೆಲೆ ಇಳಿಕೆಯಾಗಿತ್ತು. ಅದಾದ 48 ಗಂಟೆಗಳ ಬಳಿಕ ಗ್ಯಾಸ್ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿವೆ. 14.2 ಕೆಜಿಯ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದೆ.
ಇಂದಿನಿಂದ ದೆಹಲಿಯಲ್ಲಿ ಗೃಹಬಳಕೆ LPG ಸಿಲಿಂಡರ್ ಬೆಲೆ 1053 ರೂ. ಇರಲಿದೆ. ಇದಲ್ಲದೆ ಐದು ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯೂ ಏರಿಕೆಯಾಗಿದೆ. ಐದು ಕೆ.ಜಿ ಸಿಲಿಂಡರ್ ಬೆಲೆ 18 ರೂಪಾಯಿ ಹೆಚ್ಚಳ ಮಾಡಲಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 8.50 ರೂ. ಹೆಚ್ಚಳವಾಗಿದೆ. Lpg gas price -50 increase in domestic gas cylinder price
ಮೊದಲ ಬಾರಿಗೆ ಗೃಹಬಳಕೆಯ ಸಿಲಿಂಡರ್‌ನ ಬೆಲೆಯನ್ನ ಹೆಚ್ಚಿಸಲಾಗಿದ್ದು, ವಾಣಿಜ್ಯ ಸಿಲಿಂಡರ್‌ನ ಬೆಲೆ ಇಳಿಕೆಯಾಗಿದೆ. ಜುಲೈ 1ರಿಂದ 19 ಕೆಜಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್ 198 ರೂಪಾಯಿ ಕಡಿಮೆ ಮಾಡಲಾಯಿತು. ಇದಕ್ಕೂ ಮುನ್ನ ಜೂನ್‍ನಲ್ಲಿ 19 ಕೆಜಿ ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್‌ಗೆ 135 ರೂಪಾಯಿ ಇಳಿಕೆಯಾಗಿತ್ತು.
ವಿವಿಧ ನಗರಗಳಲ್ಲಿ 14.2 ಕೆಜಿ ಗ್ಯಾಸ್ ಸಿಲಿಂಡರ್ ಬದಲಾದ ಬೆಲೆ ಈ ರೀತಿ ಇದೆ. ಕೆಳಗಿನಂತಿದೆ-
ದೆಹಲಿ- ಪ್ರತಿ ಸಿಲಿಂಡರ್‌ಗೆ 1,053 ರೂ
ಮುಂಬೈ – 1,052 ರೂ
ಕೋಲ್ಕತ್ತಾ – 1,079 ರೂ
ಚೆನ್ನೈ – 1,068 ರೂ
Lpg gas price -50 increase in domestic gas cylinder price