Lpg gas price : ವರ್ಷದ ಮೊದಲ ದಿನ LPG ಸಿಲಿಂಡರ್ ಬೆಲೆ ಏರಿಕೆ…..
ಹೊಸ ವರ್ಷದ ಆರಂಭದಲ್ಲಿ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಕಹಿ ಸುದ್ದಿ ಸಿಕ್ಕಿದೆ. ವರ್ಷದ ಮತ್ತು ತಿಂಗಳ ಮೊದಲ ದಿನವಾದ ಇಂದು ಗೃಹ ಬಳಕೆಯ ಸಿಲಿಂಡರ್ ದರ ಏರಿಕೆಯಾಗದಿದ್ದರೂ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆಯಲ್ಲಿ ಏರಿಕೆ ಕಂಡು ಬಂದಿದೆ.
ಈ ಬಾರಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25 ರುಪಾಯಿಗಳ ಹೆಚ್ಚಳ ಕಂಡು ಬಂದಿದೆ. ಆದರೇ ಗೃಹ ಬಳಕೆಯ ಸಿಲಿಂಡರ್ ಬೆಲೆ ಯಥಾ ಸ್ಥಿತಿ ಮುಂದುವರೆದಿದೆ. ಕಳೆದ ವರ್ಷದಿಂದ ಗೃಹ ಬಳಕೆ ಸಿಲಿಂಡರ್ ಬೆಲೆ ನಾಲ್ಕು ಬಾರಿ ಏರಿಕೆಯಾಗಿದ್ದರೂ ಕಳೆದ ಜುಲೈ ತಿಂಗಳಿನಿಂದ ಯಾವುದೇ ಏರಿಕೆ ಕಂಡು ಬಂದಿಲ್ಲ.
ವಾಣಿಜ್ಯ ಸಿಲಿಂಡರ್ ದರಗಳು: (ರೂ.ಗಳಲ್ಲಿ)
ದೆಹಲಿ – 1769 ರೂ.
ಮುಂಬೈ – 1721 ರೂ.
ಕೊಲ್ಕತ್ತಾ – 1870 ರೂ.
ಚೆನ್ನೈ – 1917 ರೂ.
ಗೃಹ ಬಳಕೆ ಸಿಲಿಂಡರ್ ದರಗಳು
ದೆಹಲಿ – 1053 ರೂ.
ಮುಂಬೈ – 1052.5 ರೂ.
ಕೋಲ್ಕತ್ತಾ – 1079 ರೂ.
ಚೆನ್ನೈ – 1068.5 ರೂ.
Lpg gas price: Commercial LPG cylinder price hike on the first day of the year….