Dhoni | 50 ರನ್ ಗಳಿಸಿ ನಯಾ ದಾಖಲೆ ಬರೆದ ಧೋನಿ
ಕಳೆದ ಎರಡು ವರ್ಷಗಳಿಂದ ಐಪಿಎಲ್ ನಲ್ಲಿ ಕಳಪೆ ಬ್ಯಾಟಿಂಗ್ ಫಾರ್ಮ್ ಎದುರಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಬಾರಿಯ ಐಪಿಎಲ್ ನಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.
ಶನಿವಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಧೋನಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ಇದರೊಂದಿಗೆ ಎಂ.ಎಸ್. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅಪರೂಪ ದಾಖಲೆ ಬರೆದಿದ್ದಾರೆ. ಐಪಿಎಲ್ ನಲ್ಲಿ ಧೋನಿ ಹಿಂದೆ ಆರ್‌ಸಿಬಿ ವಿರುದ್ಧ ಕೊನೆಯ ಬಾರಿಗೆ ಅರ್ಧಶತಕ ಸಿಡಿಸಿದ್ದರು.
ಆ ಇನ್ನಿಂಗ್ಸ್ ನಲ್ಲಿ 48 ಎಸೆತಗಳಲ್ಲಿ 84 ಗಳಿಸಿದ್ದ ಧೋನಿ, ಶನಿವಾರ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 38 ಎಸೆತಗಳಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 50 ರನ್ ಗಳಿಸಿ ಅಜೇಯರಾಗುಳಿದರು.
ಈ ಮೂಲಕ ಐಪಿಎಲ್ ನಲ್ಲಿ 24ನೇ ಅರ್ಧಶತಕ ದಾಖಲಿಸಿದರು. ಐಪಿಎಲ್‌ನಲ್ಲಿ ಅರ್ಧಶತಕ ಬಾರಿಸಿದ ಅತಿ ಹಿರಿಯ ಬ್ಯಾಟ್‌್ ಮನ್ (40 ವರ್ಷ 262 ದಿನಗಳು) ಎಂಬ ದಾಖಲೆಯನ್ನು ಧೋನಿ ಸೃಷ್ಟಿಸಿದರು.
ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ (40 ವರ್ಷ 116 ದಿನಗಳು) ಮತ್ತು ಸಚಿನ್ ತೆಂಡೂಲ್ಕರ್ (39 ವರ್ಷ 362 ದಿನಗಳು) ಇದ್ದಾರೆ.